ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ : ಘಟನೆ ಖಂಡಿಸಿ ಮೈಸೂರಿನಲ್ಲಿ ವಕೀಲರಿಂದ ಪ್ರತಿಭಟನೆ.
12:55 PM Dec 04, 2023 IST | prashanth
ಮೈಸೂರು,ಡಿಸೆಂಬರ್,4,2023(www.justkannada.in): ಚಿಕ್ಕಮಗಳೂರಿನಲ್ಲಿ ಹೆಲ್ಮೆಟ್ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರ ಮೇಲೆ ಪೊಲೀಸರಿಂದ ಹಲ್ಲೆ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಘಟನೆಯನ್ನ ಖಂಡಿಸಿ ಇಂದು ಮೈಸೂರಿನಲ್ಲಿ ವಕೀಲರಿಂದ ಪ್ರತಿಭಟನೆ ನಡೆಯಿತು.
ಮೈಸೂರು ನ್ಯಾಯಾಲಯ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಮೈಸೂರು ಜಿಲ್ಲಾ ವಕೀಲರಿಂದ ಪ್ರತಿಭಟನೆ ನಡೆಯಿತು. ಕೋರ್ಟ್ ಕಲಾಪ ಬಹಿಷ್ಕರಿಸಿ ವಕೀಲರು ಧರಣಿ ನಡೆಸಿದ್ದು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಕೋರ್ಟ್ ಮುಂಭಾಗದಿಂದ ಪ್ರತಿಭಟನೆ ಮೆರವಣಿಗೆ ಹೊರಟು ರಾಮಸ್ವಾಮಿ ವೃತ್ತ ತಲುಪಿದ ವಕೀಲರು, ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಭದ್ರತೆ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಪೋಲೀಸರ ಕಟ್ಟೆಚ್ಚರ ವಹಿಸಿದ್ದು, ಕೋರ್ಟ್ ಮುಂಭಾಗ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
Key words: assult- lawyer – Chikkamagalur-Protest - lawyers - Mysore