ಶಾಸಕ ಮುನಿರತ್ನ ವಿರುದ್ದ ಅಟ್ರಾಸಿಟಿ ಕೇಸ್ ದಾಖಲಿಸಿ, ಬಿಜೆಪಿಯಿಂದ ಉಚ್ಚಾಟಿಸಬೇಕು-ಎಂ.ಲಕ್ಷ್ಮಣ್ ಆಗ್ರಹ
ಮೈಸೂರು,ಸೆಪ್ಟಂಬರ್,14,2024 (www.justkannada.in): ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಅವಾಚ್ಯ ಶಬ್ದಗಳಿಂದ ಬೈದಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಅಟ್ರಾಸಿಟಿ ಕೇಸ್ ದಾಖಲಿಸಿಬೇಕು. ಬಿಜೆಪಿ ತನ್ನ ಪಕ್ಷದಿಂದ ಮುನಿರತ್ನರನ್ನ ಉಚ್ಚಾಟಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.
ಈ ಸಂಬಂಧ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಘನತ್ಯಾಜ್ಯ ನಿರ್ವಹಣೆಗೆ ಗಂಗಾ ಎಂಟರ್ ಪ್ರೈಸಸ್ ಗೆ ನೀಡಲಾಗಿತ್ತು. ಮೂವತ್ತು ಲಕ್ಷದ ಟೆಂಡರ್ ಗೆ 15ಲಕ್ಷ ಕಮಿಷನ್ ಕೇಳಿದ್ದಾರೆ. ಈ ವೇಳೆ ಆ ವ್ಯಕ್ತಿಗೆ ಶಾಸಕ ಮುನಿರತ್ನ ಕೆಟ್ಟ ಪದಗಳನ್ನ ಬಳಸಿ ಬೈದಿದ್ದಾರೆ. ಈಗಾಗಲೇ ಆ ಆಡಿಯೋ ಎಲ್ಲಾ ಕಡೆ ವೈರಲ್ ಆಗಿದೆ ಎಂದು ಕಿಡಿಕಾರಿದರು. ಹಾಗೆಯೇ ಇದೇ ವೇಳೆ ಮುನಿರತ್ನ ಟೆಂಡರ್ ದಾರನಿಗೆ ಬೈದಿರುವ ಆಡಿಯೋ ಪ್ಲೇ ಮಾಡಿದರು.
ಒಕ್ಕಲಿಗ ಸಮುದಾಯದ ಹೆಣ್ಣು ಮಕ್ಕಳನ್ನ ಈತ ಮಂಚಕ್ಕೆ ಕರೀತಾನೆ. ಒಕ್ಕಲಿಗ ಸಮುದಾಯದ ಮುಖಂಡರು ಈಗ ಎಲ್ಲಿದ್ದಾರೆ. ಸಮುದಾಯದ ಹೆಣ್ಣು ಮಕ್ಕಳಿಗೆ ಬೈದಿರೋ ಬಗ್ಗೆ ಯಾರು ಮಾತನಾಡುತ್ತಿಲ್ಲ. ಇದು ಬಿಜೆಪಿ ನಾಯಕರ ಸಂಸ್ಕೃತಿ. ಇಂತಹ ವ್ಯಕ್ತಿ ಯಾವುದೇ ಪಾರ್ಟಿಯಲ್ಲಿದ್ದರೂ ಕ್ರಮ ತೆಗೆದುಕೊಳ್ಳಬೇಕು. ಈ ರೀತಿಯಾದ ಪದ ಬಳಕೆ ಮಾಡಿರುವ ಮುನಿರತ್ನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮುನಿರತ್ನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು ಮಾಡಬೇಕು. ಮುಂದಿನ ದಿನಗಳಲ್ಲಿ ಅಹಿತಕರ ಘಟನೆ ನಡೆದ್ರೆ ಪೊಲೀಸ್ ನವರೇ ಹೊಣೆಯಾಗ್ತಾರೆ ಎಂದು ಎಚ್ಚರಿಸಿದರು.
ಶಾಸಕ ಮುನಿರತ್ನ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡುತ್ತೇವೆ.
ಶಾಸಕ ಮುನಿರತ್ನ ನನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಬಿಜೆಪಿ ಸದಸ್ಯತ್ವ ವಾಪಸ್ ಪಡೆಯಬೇಕು. ಶಾಸಕ ಮುನಿರತ್ನ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಈತನ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಸಚಿವರನ್ನ ಕೂಡ ಆಗ್ರಹ ಮಾಡುತ್ತೇವೆ. ಸದ್ಯದಲ್ಲೇ ಶಾಸಕ ಮುನಿರತ್ನ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಸ್ವಾಭಿಮಾನಿ ಒಕ್ಕಲಿಗರು, ದಲಿತರು ಎಲ್ಲರು ಪಕ್ಷತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ಎಂದು ಎಂ ಲಕ್ಷ್ಮಣ್ ಮನವಿ ಮಾಡಿದರು.
Key words: Atrocity case, against, MLA Muniratna, mysore, M. Laxman