For the best experience, open
https://m.justkannada.in
on your mobile browser.

ಏಳು ವರ್ಷದ ಬಾಲಕಿ ಕಿಡ್ನಾಪ್ ಗೆ ಯತ್ನ: ಆರೋಪಿ ಪೊಲೀಸರ ವಶಕ್ಕೆ

01:33 PM Sep 09, 2024 IST | prashanth
ಏಳು ವರ್ಷದ ಬಾಲಕಿ ಕಿಡ್ನಾಪ್ ಗೆ ಯತ್ನ  ಆರೋಪಿ ಪೊಲೀಸರ ವಶಕ್ಕೆ

ರಾಮನಗರ, ಸೆಪ್ಟೆಂಬರ್​, 9,2024 (www.justkannada.in): ಏಳು ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಆರೋಪಿಯನ್ನ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ರಾಮನಗರದ ಚಾಮುಂಡಿಪುರ ಲೇಔಟ್​ ನಲ್ಲಿ ಈ ಘಟನೆ ನಡೆದಿದ್ದು ದರ್ಶನ್​ (22) ಬಂಧಿತ ಆರೋಪಿ.  ಈತ ಏಳು ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ದರ್ಶನ್​ ಬಾಲಕಿಯ ಪಕ್ಕದ ಮನೆಯವನಾಗಿದ್ದು,​ ​ಬಾಲಕಿಯನ್ನು ಅಪಹರಣ ಮಾಡಿ ಎರಡು ಲಕ್ಷ ರೂ. ಬೇಡಿಕೆ ಇಡಲು ಯೋಚಿಸಿದ್ದ ಎನ್ನಲಾಗಿದೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಬಾಲಕಿ ಗಣೇಶ ಪೆಂಡಲ್​ ಬಳಿ ಇದ್ದಳು. ಈ ಸಮಯದಲ್ಲಿ ಅಲ್ಲಿಗೆ ಬಂದ ಆರೋಪಿ ದರ್ಶನ್ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಾಲಕಿ ಕೈ ಮತ್ತು ಬಾಯಿಗೆ ಸುತ್ತಿ ಅಪಹರಣಕ್ಕೆ ಯತ್ನಸಿದ್ದಾನೆ.

ಈ ಮಧ್ಯೆ ಮಗಳು ಕಾಣದಿದ್ದಾಗ ತಂದೆ ಸಂತೋಷ್​ ಗಾಬರಿಗೊಂಡು ಹುಡುಕಾಡಲು ಆರಂಭಿಸಿದ್ದು. ಈ ವಿಚಾರವನ್ನು ಗಣೇಶ ಪೆಂಡಲ್​ ಬಳಿ ಇದ್ದ ಯುವಕರಿಗೂ ತಿಳಿಸಿದ್ದಾರೆ.

ಈ ವೇಳೆ ಯುವಕರು ಹುಡುಕಾಟ ಆರಂಭಿಸಿದ್ದು ಹೆದರಿದ ದರ್ಶನ್ ಬಾಲಕಿಯನ್ನ ಅಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಕೂಡಲೆ ಯುವಕರು ಬಾಲಕಿ ಕೈ ಮತ್ತು ಬಾಯಿಗೆ ಹಚ್ಚಿದ್ದ ಟೇಪ್​ ತೆಗೆದು ರಕ್ಷಿಸಿದ್ದಾರೆ. ಆರೋಪಿ ದರ್ಶನ್​ನನ್ನು ಯುವಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Attempt, kidnap, old girl,  Accused, arrest

Tags :

.