For the best experience, open
https://m.justkannada.in
on your mobile browser.

ವೈದ್ಯಕೀಯ ಸಂಸ್ಥೆಗಳ "MEDICAL AUDIT" ಸದ್ಯದ ತುರ್ತು ಅವಶ್ಯಕ : ‌ ಸಂಸದ ಡಾ.ಸಿ.ಎನ್.ಮಂಜುನಾಥ್

02:45 PM Aug 19, 2024 IST | mahesh
ವೈದ್ಯಕೀಯ ಸಂಸ್ಥೆಗಳ  medical audit  ಸದ್ಯದ ತುರ್ತು ಅವಶ್ಯಕ   ‌ ಸಂಸದ ಡಾ ಸಿ ಎನ್ ಮಂಜುನಾಥ್

The public who brings patients to the hospital should also respond with the doctors. But ironically, cases of patients being misbehaved with and assaulted by relatives of patients are on the rise. If the situation continues like this, one day doctors may have to work with the help of "gunmen"

ಮೈಸೂರು, ಆ.19,2024: (www.justkannada.in news) ದೇಶದಾದ್ಯಂತ ವೈದ್ಯಕೀಯ ಸಂಸ್ಥೆಗಳ ಆಡಿಟ್‌ ಆಗಬೇಕಾದ ತುರ್ತು ನಿರ್ಮಾಣವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ, ಡಾ. ಸಿ.ಎನ್.ಮಂಜುನಾಥ್‌ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ವತಿಯಿಂದ ವಿಜ್ಞಾನ ಭವನದಲ್ಲಿ ಇಂದು ಆಯೋಜಿಸಿದ್ದ ಮೂರು ಪುಸ್ತಕಗಳ  ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕೊಲ್ಕತ್ತಾದಲ್ಲಿ ಮಹಿಳಾ ವೈದ್ಯ ಮೇಲೆ ನಡೆದ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಡಾ.ಮಂಜುನಾಥ್‌, ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಶೇ.55 ರಷ್ಟು ಮಹಿಳೆಯರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಥ ಪ್ರಕರಣಗಳು ನಡೆದಾಗ ಇದು ಅವರನ್ನು ವಿಚಲಿತಗೊಳಿಸುತ್ತದೆ. ಆದ್ದರಿಂದ ಕೂಡಲೇ ಈ ಬಗ್ಗೆ ಕಠಿಣ ಕ್ರಮ ಜರುಗಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸಂಸ್ಥೆಗಳ ಆಡಿಟ್‌ ನಡೆಸಬೇಕಾದ ತುರ್ತು ಎದುರಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ದಿನದ ೨೪ ಗಂಟೆಗಳು ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ. ಆದ್ದರಿಂದ ಇವರಿಗೆ ಸೂಕ್ತ ಮೂಲಸವಲತ್ತು ಒದಗಿಸಬೇಕಾಗಿದೆ. ಶೌಚಾಲಯ್ಯ, ವಿಶ್ರಾಂತಿ ಕೊಠಡಿ, ಡೈನಿಂಗ್‌ ಹಾಲ್‌ ಮುಂತಾದ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಆಗ ಮಾತ್ರ ವೈದ್ಯರು ಅದರಲ್ಲೂ ಮಹಿಳಾ ವೈದ್ಯರು ನಿರ್ಭೀತಿಯಿಂದ ಕರ್ತವ್ಯ ಮಾಡಲು ಸಾಧ್ಯವಾಗುತ್ತದೆ.  ಈ ವ್ಯವಸ್ಥೆಯನ್ನು ಹತ್ತು ವರ್ಷಗಳ ಹಿಂದೆಯೇ ನಾನು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಜಾರಿಗೊಳಿಸಿರುವೆ.

ಗನ್‌ ಮೆನ್‌ :

ರೋಗಿಗಳನ್ನು ಆಸ್ಪತ್ರೆಗೆ ಕರೆತರುವ ಸಾರ್ವಜನಿಕರು ಸಹ ವೈದ್ಯರ ಜತೆ ಸ್ಪಂಧಿಸಬೇಕು. ಆದರೆ ವಿಪರ್ಯಾಸವೆಂದರೆ, ವೈದ್ಯರ ಜತೆ ರೋಗಿಗಳ ಸಂಬಂಧಿಕರು ಅನುಚಿತವಾಗಿ ವರ್ತಿಸುವ, ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಮುಂದೊಂದು ದಿನ ವೈದ್ಯರು “ ಗನ್‌ ಮೆನ್‌ “  ಗಳ ನೆರವಿನಿಂದ ಕರ್ತವ್ಯ ನಿರ್ವಹಿಸಬೇಕಾಗಬಹುದು ಎಂದು ಮಾರ್ಮಿಕವಾಗಿ ನುಡಿದರು.

ಮಾನವ ಸಂಪನ್ಮೂಲ :

ಕೇವಲ ದೊಡ್ಡ ದೊಡ್ಡ ಕಟ್ಟಡಗಳ ಐಷಾರಾಮಿ ಆಸ್ಪತ್ರೆಗಳು, ಅತ್ಯಾಧುನಿಕ ಉಪಕರಣಗಳು ಇದ್ದರೆ ಮಾತ್ರ ಸಾಲದು. ಇದಕ್ಕೆ ಪೂರಕವಾದ ಮಾನವ ಸಂಪನ್ಮೂಲದ ಅವಶ್ಯಕತೆ ಪೂರೈಸುವ ಹೂಣೆಗಾರಿಕೆಯನ್ನು ಸರಕಾರಗಳು ನಿಭಾಯಿಸಬೇಕು. ಆಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ.

ಈ ಬಗ್ಗೆ ಸರಕಾರಕ್ಕೆ ಏನಾದರು ಪ್ರಸ್ತಾವನೆ ಸಲ್ಲಿಸಿದರೆ, ಅಷ್ಟೊಂದು ಜನ ಯಾಕೆ ಎಂಬ ಪ್ರಶ್ನೆ ಎದುರಿಸಬೇಕಾಗುತ್ತದೆ. ಸಚಿವರ ಆಪ್ತ ವಲಯದಲ್ಲಿರುವ ವ್ಯಕ್ತಿಗಳು ಎಷ್ಟೊಂದು ಪ್ರಭಾವಿಗಳಾಗಿರುತ್ತಾರೆ ಎಂದರೆ, ಅಧಿಕಾರಿಗಳನ್ನು ಬದಲಾಯಿಸು ಸಾಮರ್ಥ್ಯ ಅವರಿಗಿರುತ್ತದೆ. ಈ ವ್ಯವಸ್ಥೆ ಬದಲಾಗಬೇಕು. ಕೆಲವೊಂದು ಸಲ ಸಚಿವರ ವಾಹನ ಚಾಲಕರು, ಆಪ್ತ ಸಹಾಯಕ ಸಿಬ್ಬಂದಿಗಳೇ ವ್ಯವಸ್ಥೆಯನ್ನು ನಿಯಂತ್ರಿಸುವ ಸಾಮಾರ್ಥ್ಯ ಹೊಂದಿರುತ್ತಾರೆ ಎಂದರು.

ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್‌, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಡಾ.ಸಿ.ಎನ್.ಶರತ್‌ ಕುಮಾರ್‌, ಪ್ರೊ.ಸಿ.ನಾಗಣ್ಣ, ಲೇಖಕಿ ಹಾಗೂ ಪ್ರಾಧ್ಯಾಪಕಿ ಡಾ.ಸುತ್ತೂರು ಎಸ್.ಮಾಲಿನಿ, ಮೋಹನ್‌ ಪಿ.ನಾಗರಾಜನ್‌ ಹಾಜರಿದ್ದರು.

KEY WORDS: audit, medical institutions, across the country, MP ,Bengaluru Rural Lok Sabha constituency, C.N. Manjunath, opined.

SUMMARY:

There is an urgent need to audit medical institutions across the country, MP from Bengaluru Rural Lok Sabha constituency. C.N. Manjunath opined.

Expressing deep concern over the rape and murder of a woman doctor in Kolkata, Dr Manjunath said that 55 per cent of the medical sector in the country is occupied by women. When such cases happen, it distracts them. Therefore, strict action needs to be taken immediately.

The public who brings patients to the hospital should also respond with the doctors. But ironically, cases of patients being misbehaved with and assaulted by relatives of patients are on the rise. If the situation continues like this, one day doctors may have to work with the help of "gunmen"

Tags :

.