For the best experience, open
https://m.justkannada.in
on your mobile browser.

ಆ.28 ರಂದು ‘ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ’ ಸಮಾವೇಶ

03:41 PM Aug 13, 2024 IST | prashanth
ಆ 28 ರಂದು ‘ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ’ ಸಮಾವೇಶ

ಬೆಂಗಳೂರು,ಆಗಸ್ಟ್,13,2024 (www.justkannada.in): ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ಆಗಸ್ಟ್ 28 ರಂದು ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ’ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ನಟ ಚೇತನ್ ಹಾಗೂ ಪ್ರೊ ಹರಿರಾಮ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಈ ಸಂಬಂಧ ಮಾತನಾಡಿ ಮಾಹಿತಿ ನೀಡಿದ ಪ್ರೊ. ಹರಿರಾಮ್, ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ದಿನಾಂಕ 28/08/2024 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ ಎಂಬ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ಸರಕಾರ ದಲಿತ ಪರವಾಗಿಲ್ಲ. ದಲಿತರಿಗೆ ಇರುವ ಉದ್ಯೋಗ ಸ್ವಾವಲಂಬನೆ ರದ್ದು ಮಾಡಿದ್ದಾರೆ. ಪ್ರಭುದ್ಧ ಎಂಬ ಯೋಜನೆ ರದ್ದು ಮಾಡುತ್ತಾರೆ. ಹೆಚ್ ಸಿ ಮಹದೇವಪ್ಪ ಅವರಿಗೆ ಕೇಳಿದರೆ ನನಗೆ ಗೊತ್ತೇ ಇಲ್ಲ ಅಂತಾರೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರಬೇಕು ಎಂದು ಹೋರಾಡುತ್ತಾರೆ. ಆದರೆ, ಇವರು ಅಧಿಕಾರಕ್ಕೆ ಬಂದಾಗ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಏಕೆ ತಂದಿಲ್ಲ. ಒಳ ಮೀಸಲಾತಿಯನ್ನು ಯಾಕೆ ಜಾರಿಗೆ ತಂದಿಲ್ಲ? ಎಂದು ಪ್ರಶ್ನಿಸಿದರು.

ಸರಕಾರ ಎಸ್ ಇಪಿ /ಟಿಎಸ್ ಪಿ ಹಣ ದುರುಪಯೋಗ ಪಡಿಸಿಕೊಂಡವರೂ ಸಹ ಸೋ ಕಾಲ್ಡ್ ದಲಿತ ಪರ ಹೋರಾಡುವವರು  ಮಾತನಾಡುತ್ತಿಲ್ಲ. ಪ್ರಗತಿಪರರು ಮಾತನಾಡುತ್ತಲೇ ಇಲ್ಲ. ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ. ಪ್ರಗತಿಪರರು ಬೇರೆ ದೇಶದಲ್ಲಿ ಏನಾದರೂ ಆದರೆ ದೊಡ್ಡದಾಗಿ ಟೌನ್ ಹಾಲ್ ಮುಂಭಾಗ ಕ್ಯಾಂಡಲ್ ಮಾರ್ಚ್ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ನಮ್ಮ ರಾಜ್ಯದಲ್ಲಿ ದಲಿತರ ಹಣ ದುರುಪಯೋಗವಾದರೆ ಮಾತನಾಡುತ್ತಿಲ್ಲ. ಸಿದ್ದರಾಮಯ್ಯ ಅಂದುಕೊಂಡಿರಬಹುದು ಎಲ್ಲರನ್ನು ಜೇಬಿಗೆ ಹಾಕಿಕೊಂಡಿದ್ದೇವೆ ಅಂತ. ಅಂಬೇಡ್ಕರ್ ವಾದಿಗಳು ಇದ್ದೇವೆ ನಮ್ಮನ್ನು ಕೊಂಡುಕೊಳ್ಳಲು ಆಗುವುದಿಲ್ಲ. ಹೆಚ್ ಸಿ ಮಹದೇವಪ್ಪ ಡಮ್ಮಿ ಆಗಿದ್ದರೋ ಡುಮ್ಮಿ ಆಗಿದ್ದಾರೋ ಗೊತ್ತಿಲ್ಲ. ನಾವು ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡುತ್ತಿಲ್ಲ. ಅವರ ನಡವಳಿಕೆ ಪ್ರಶ್ನೆ ಮಾಡುತ್ತಿದ್ದೇವೆ. ನೀವೇ ಹಣ ಮೀಸಲು ಇಟ್ಟಿದ್ದೀರಿ ಒಪ್ಪಿಕೊಳ್ಳೋಣ.  ಆದರೆ ಕದ್ದಾಗ ಯಾಕೆ ಕದ್ದಿದ್ದೀರಿ ಅಂತ ಕೇಳಬೇಕಲ್ವಾ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರೊ ಹರಿರಾಮ್ ವಾಗ್ದಾಳಿ ನಡೆಸಿದರು.

ಐದು ಯೋಜನೆಗಳಿಗೆ ದಲಿತರ ಹಣ ದುರ್ಬಳಕೆ – ನಟ ಚೇತನ್ ಕಿಡಿ

ಇದೇ ವೇಳೆ ಮಾತನಾಡಿದ ನಟ ಚೇತನ್, ಸಿದ್ದರಾಮಯ್ಯ ಕಾಂಗ್ರೆಸ್ ಸರಕಾರ 5 ಯೋಜನೆಗಳಿಗೆ ದಲಿತರ ಹಣ ದುರ್ಬಳಕೆ ಮಾಡಿದ್ದಾರೆ.  ಹೀಗಾಗಿ ಪರಿವರ್ತನ ಶಾಯಿ, ನ್ಯಾಯಯಾದ ಬಗ್ಗೆ ಕಲ್ಪನೆ ಇಟ್ಟುಕೊಂಡು ನಾವು "ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ" ಎಂಬ ಹೋರಾಟ ಮಾಡುತ್ತಿದ್ದೇವೆ. ದಲಿತರು ಮಾತ್ರ ಅಲ್ಲ. ಸಂವಿಧಾನ ಪೀಠಿಕೆ ನಂಬಿದವರು ಎಲ್ಲರು ಅಂದು ಸೇರುತ್ತಾರೆ. ಕರ್ನಾಟಕ ನೋಡಿದ್ರೆ ಯಾವ ಸಮುದಾಯ ರಾಜಕೀಯ ಲಾಭ ಇದೆ ಅಂದ್ರೆ ಲಿಂಗಾಯತ ಜನಶಕ್ತಿ ಜಾಸ್ತಿ ಇದೆ ಅವರಿಗೆ ಬಿಜೆಪಿ ಇದೆ ಅಂತ ಜನ ಹೇಳುತ್ತಾರೆ.  ಜೆಡಿಎಸ್ ಒಕ್ಕಲಿಗರಿಗೆ ಅಂತ ಅವರು ಹೇಳುತ್ತಾರೆ. ಕಾಂಗ್ರೆಸ್ ಮುಸಲ್ಮಾನ ಪರವಾಗಿ ಇದ್ದಿವಿ ಅಂತ ಮತ ಸೇಳಿತಾರೆ. ಆದರೆ ಎಲ್ಲಕ್ಕಿಂತ ಜಾಸ್ತಿ ಜನ ಇರುವ  ದಲಿತರು, ಆದಿವಾಸಿಗಳ ಪರ ಯಾವ ಪಕ್ಷಗಳು ನಿಂತಿಲ್ಲ. ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಕಾಂಗ್ರೆಸ್ ಸರಕಾರ 5 ಯೋಜನೆಗಳಿಗೆ ದಲಿತರ ಹಣ ದುರ್ಬಳಕೆ ಮಾಡಿದ್ದಾರೆ. ಖಾಸಗಿ ವಲಯ ಮೀಸಲಾತಿ ಕೂಡ ಜಾತ್ಯಾತೀತ ಇದೆ ಅಂತ ನಾವು ಹೋರಾಟ ಮಾಡುವಾಗ ಸಿದ್ದರಾಮಯ್ಯರವರು ಲಾಟಿ ಚಾರ್ಜ್ ಮಾಡಿಸಿದ್ದರು. ನಂತರ ಅವರು ಅಧಿಕಾರದಿಂದ ಇಳಿದ ಮೇಲೆ ಖಾಸಗಿ ಮೀಸಲಾತಿ ಬೇಕು ಅಂತಾರೆ. ಇದು ಹೇಡಿ ಸರ್ಕಾರ ಶ್ರೀಮಂತರ ಪರವಾಗಿ ಇರುವ ಸರಕಾರ. ದೊಡ್ಡದ್ದಾಗಿ ಅಂಬೇಡ್ಕರ್ ಫಲಪುಷ್ಪ ಪ್ರದರ್ಶನ ಮಾಡುತ್ತೀರಾ. ಒಳಮೀಸಲಾತಿ ಉದ್ದೇಶ ಪೂರ್ವಕ ತಂದಿಲ್ಲ. ಮೂಡಾ ಹಗರಣದಲ್ಲಿ ದಲಿತರ ಭೂಮಿ ಪಡೆದುಕೊಂಡಿದ್ದಾರೆ. ಸ್ವಾರ್ಥಕಾಗಿ ಫಲಾನುಭವಿ ಆಗೋದು ಎಷ್ಟು ಸರಿ  ಎಂದು ನಟ ಚೇತನ್ ಕಿಡಿಕಾರಿದರು.

ಎಲ್ಲರು ಕೂಡ ವೈಯಕ್ತಿಕ, ಮನುವಾದಿ, ಬ್ರಾಹ್ಮಣ್ಯ, ಪರವಾಗಿ ನಿಂತಿದ್ದಾರೆ. ನಾವೇ ನಿಜವಾದ ಅಂಬೇಡ್ಕರ್ ವಾದಿಗಳು. ನಾಲ್ವಡಿ ಕೃಷ್ಣರಾಜ ಒಡೆಯರ್ ಅದ್ಬುತ ಸಾಮಾಜಿಕ ನ್ಯಾಯದ ಪರಿಕಲ್ಪನೆ ತಂದವರು. ಆಧುನಿಕ ಸಾಮಾಜಿಕ ಆರ್ಥಿಕ ಶೈಕ್ಷಣಿಕ ನ್ಯಾಯ ಬೇಕಾಗಿದೆ. ರಾಜ್ಯದಲ್ಲಿ ದಲಿತರು. ಆದಿವಾಸಿಗಳು. ಅಲ್ಪಸಂಖ್ಯಾತರು ವಿರೋಧ ಪಕ್ಷದವರಾಗಿದ್ದೇವೆ ಎಂದು ನಟ ಚೇತನ್ ಬೇಸರ ವ್ಯಕ್ತಪಡಿಸಿದರು.

Key words:  August 28, 'Congress Hathao Dalit Bachao, convention

Tags :

.