For the best experience, open
https://m.justkannada.in
on your mobile browser.

ಶಿಕ್ಷಣದ ಜೊತೆ ಪರಿಸರ ಸಂರಕ್ಷಣೆ ಅರಿವು: ಒಂದು ಸಾವಿರ ಸಸಿಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ.

03:21 PM Jun 11, 2024 IST | prashanth
ಶಿಕ್ಷಣದ ಜೊತೆ ಪರಿಸರ ಸಂರಕ್ಷಣೆ ಅರಿವು  ಒಂದು ಸಾವಿರ ಸಸಿಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು,ಜೂನ್,11,2024 (www.justkannada.in):  ಮೈಸೂರಿನ ರೋಟರಿ ಕ್ಲಬ್ ಸಂಸ್ಥೆಗಳ ವಲಯ - 8 ಮತ್ತು ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ 1000 ಸಸಿಗಳನ್ನೂ ನೆಡುವ ಕಾರ್ಯಕ್ರಮಕ್ಕೆ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಚಾಲನೆ ನೀಡಲಾಯಿತು.

ರೋಟರಿ ಇಂಟರ್ ನ್ಯಾಷನಲ್ 3181 ರ ಜಿಲ್ಲೆಯ ಜಿಲ್ಲಾ ಗವರ್ನರ್ ರೋಟರಿಯನ್ ವಿಕ್ರಮದತ್ತಾ ಮಾತನಾಡಿ, ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನೂ ಕೊಡಲು ಮೈಸೂರಿನಲ್ಲಿ ಪ್ರಾರಂಭವಾಗಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ರೋಟರಿ ಸಂಸ್ಥೆಗಳು, ಅರಣ್ಯ ಇಲಾಖೆಯ ಸಹಯೋಗದೊಂದಿಗೆ 1000 ಸಸಿಗಳನ್ನ ನೆಡುವ ಈ ವಿನೂತನ ಕಾರ್ಯಕ್ರಮ ಮಾಡುತ್ತಿರುವುದು ಶಿಕ್ಷಣದ ಜೊತೆಗೆ, ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವೂ ಮೂಡಿಸುತ್ತೀರುವುದು ಉತ್ತಮ ಕೆಲಸವಾಗಿದೆ ಎಂದರು.

ಐ.ಎಫ್. ಎಸ್. ಅಧಿಕಾರಿ ಮೈಸೂರು ವಿಭಾಗದ ಡಿಸಿಎಫ್ ಡಾ. ಕೆ.ಎನ್. ಬಸವರಾಜ ಮಾತನಾಡಿ ಪ್ರಕೃತಿಯ ಮಡಿಲಿನಲ್ಲಿರುವ ಚಾಮುಂಡಿಬೆಟ್ಟದ ಸುಂದರ ವಾತಾವರಣದ ಈ ಶಾಲೆಯಲ್ಲಿ ಉತ್ತಮವಾಗಿ ಇರುವ ಕಟ್ಟಡದ ಜೊತೆಗೆ ಸಸಿಗಳನ್ನೂ ನೆಡುವುದರ ಮೂಲಕ ಅವೂಗಳನ್ನೂ ಬೆಳೆಸುತ್ತಿರುವುದು ಶ್ಲಾಘನೀಯ ನಮ್ಮ ಅರಣ್ಯ ಇಲಾಖೆವತಿಯಿಂದ ಈ ವರ್ಷ 3ಲಕ್ಷದ 30ಸಾವಿರ ಸಸಿಗಳನ್ನ ರೈತರಿಗೆ ಮತ್ತು ಸಾರ್ವಜನಿಕರಿಗೆ ರಿಯಾಯತಿ ದರದಲ್ಲಿ ಒಂದು ಸಸಿಗೆ ರೂ.3 ರೂಪಾಯಿಯಿಂದ 6 ರೂಪಾಯಿವರೆಗೆ ಕೊಡಲಾಗುತ್ತಿದೆ..  ಈ ವರ್ಷ ಅರಣ್ಯ ಇಲಾಖೆವತಿಯಿಂದಲೂ ಒಂದು ಲಕ್ಷ ಸಸಿಗಳನ್ನೂ ನೆಡಲಾಗುತ್ತಿದೆ. ಕೇವಲ ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನ ನೆಟ್ಟರೆ ಪರಿಸರದ ಸಂರಕ್ಷಣೆ ಸಾಧ್ಯವಿಲ್ಲ. ಇದಕ್ಕೆ ರೋಟರಿಯಂತಹ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕು ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ  ಡಾ.ಈ.ಸಿ.ನಿಂಗರಾಜ್ ಗೌಡ ಮಾತನಾಡಿ ಪರಿಸರದ ಬಗ್ಗೆ ಜಾಗೃತಿ ಮತ್ತು ಪರಿಸರ ಸಂರಕ್ಷಣೆಯ ಇಂದಿನ ತುರ್ತು ಅಗತ್ಯವಾಗಿದೆ. ಶುದ್ಧವಾದ ಗಾಳಿ, ಜಾಗತಿಕ ಹವಾಮಾನ, ತಾಪಮಾನವನ್ನೂ ಸುಸ್ಥಿತಿಯಲ್ಲಿ ಇಡಲೂ ಸಸಿಗಳನ್ನೂ ನೆಡುವುದರ ಜೊತೆಗೆ ಅವೂಗಳನ್ನೂ ಏಳೆಂಟು ವರ್ಷಗಳ ಕಾಲ ಬೆಳೆಸುವುದರ ಕಡೆಗೆ ಎಲ್ಲರೂ ಗಮನಹರಿಸಬೇಕು. ಪರಿಸರಕ್ಕೆ ಪೂರಕವಾದ ಸಸಿಗಳನ್ನ ನೆಟ್ಟು ಬೆಳೆಸಬೇಕು. ನಮ್ಮ ಮನೆಗಳಲ್ಲಿ ನಡೆಯುವ ಶುಭಕಾರ್ಯ, ಹುಟ್ಟುಹಬ್ಬ, ಮದುವೆ, ಗಣ್ಯರ ಬೇಟಿ ಇಂತಹ ಸಂದರ್ಭಗಳಲ್ಲಿ ಕನಿಷ್ಠ ಎರಡು ಸಸಿಗಳನ್ನು ನೆಟ್ಟು ಬೆಳೆಸಬೇಕು. ಆಗ ಅವುಗಳಿಗೆ ಒಂದು ಅರ್ಥ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿ ಎಲ್.ರವಿ, ಸಹಾಯಕ ಗರ್ವನರ್ ರೋಟರಿಯನ್ ಎಂ. ರಾಜೀವ್, ರೋಟರಿಯನ್ ಕೇಶವಪ್ರಕಾಶ್, ವಲಯ ಸೇನಾನಿ ರೋಟರಿಯನ್ ಎಂ.ಮೋಹನ್, ರೋಟರಿಯನ್  ಕೆ.ಎನ್. ಸಂತೋಷ್, ಎನ್.ಕಿರಣ್, ಎಂ. ಎಸ್. ಉಮಶಂಕರ್ ಆರಾಧ್ಯ, ರೋಟರಿಯನ್ ಮುರಳೀಧರ್, ರೋಟರಿಯನ್ ಗೋವರ್ಧನ್ ಯಾದವ್, ರೋಟರಿಯನ್ ಪ್ರಭಾಕರ್, ವೈಲ್ಡ್ ಲೈಫ್ ಪೊಟೊಗ್ರಾಫರ್ ರೋಟರಿಯನ್ ದಿನೇಶ್ ಬಸವಪಟ್ಟಣ, ದಿಲೀಪ್ ಆರಾಧ್ಯ ಮತ್ತಿತರರು ಉಪಸ್ಥಿತರಿದ್ದರು.

Key words: Awareness, Environment, Plantation, Programme, mysore

Tags :

.