For the best experience, open
https://m.justkannada.in
on your mobile browser.

ಅಯೋಧ್ಯೆ ವಿಶೇಷ ರೈಲಿಗೆ ನುಗ್ಗಿ ಬೆದರಿಕೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹಿಸಿದ ಮಾಜಿ ಸಚಿವ ಸಿ.ಟಿ ರವಿ.

04:45 PM Feb 23, 2024 IST | prashanth
ಅಯೋಧ್ಯೆ ವಿಶೇಷ ರೈಲಿಗೆ ನುಗ್ಗಿ ಬೆದರಿಕೆ ಪ್ರಕರಣ  ಸಮಗ್ರ ತನಿಖೆಗೆ ಆಗ್ರಹಿಸಿದ ಮಾಜಿ ಸಚಿವ ಸಿ ಟಿ ರವಿ

ಬೆಂಗಳೂರು, ಫೆಬ್ರವರಿ,23,2024(www.justkannada.in):  ಅಯೋಧ್ಯೆ ವಿಶೇಷ ರೈಲಿಗೆ ನುಗ್ಗಿ  ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಲಿ ಎಂದು ಮಾಜಿ ಸಚಿವ ಸಿ.ಟಿ ರವಿ ಆಗ್ರಹಿಸಿದರು.

ಇಂದು ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಆಯೋಧ್ಯೆ ರೈಲಿಗೆ ನುಗ್ಗಿ 'ರಾಮಭಕ್ತರನ್ನು ಸುಟ್ಟು ಹಾಕುವುದಾಗಿ ಮತಾಂಧ ವ್ಯಕ್ತಿ ಬೆದರಿಸಿದ್ದಾನೆ. ಘಟನೆ ನಡೆದ ಕೂಡಲೇ ರಾಮಭಕ್ತರು, ಆರೋಪಿಯನ್ನು ಪೊಲೀಸ್ ವಶಕ್ಕೆ ಕೊಟ್ಟಿದ್ದರು. ಆದ್ರೆ, ಯಾವ ಕಾರಣಕ್ಕೋ ಏನೋ ಆರೋಪಿ ತಪ್ಪಿಸಿಕೊಂಡು ಹೋಗಲು ಪೊಲೀಸರು ಅವಕಾಶ ಕೊಟ್ಟಿದ್ದರು, ನಂತರ ಎಲ್ಲರೂ ಪ್ರತಿಭಟನೆ ಮಾಡಿದ ಮೇಲೆ, ಪೊಲೀಸರು ಸಿಸಿಟಿವಿ ಗಮನಿಸಿ ಮತ್ತೆ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನು ಸರ್ಕಾರ ಹಗುರವಾಗಿ ತೆಗೆದುಕೊಳ್ಳಬಾರದು. ಈ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಲಿ ಎಂದರು.

ಹಾಗೆಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಸಿ.ಟಿ ರವಿ, ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸುವುದು, ಮತ್ತೆ ವಾಪಾಸ್​ ತೆಗೆದುಕೊಳ್ಳುವುದು. ಈ ತರಹ ಹಿಂದೆ ತುಘಲಕ್ ಸರ್ಕಾರ ಇತ್ತು. ಬೆಳಗ್ಗೆ ಒಂದು ಆದೇಶ ಮಾಡ್ತಿದ್ದನಂತೆ, ಸಂಜೆ ಮತ್ತೊಂದು ಆದೇಶ ಮಾಡುತ್ತಿದ್ದನಂತೆ. ಈ ಸರ್ಕಾರವೂ ತುಘಲಕ್​ನಿಂದ ಪ್ರೇರಣೆ ಪಡೆದಿರಬಹುದು ಎಂದು ಲೇವಡಿ ಮಾಡಿದರು.

Key words: Ayodhya -Special Train -Threat Case- CT Ravi –demand-investigation.

Tags :

.