For the best experience, open
https://m.justkannada.in
on your mobile browser.

ಜಾಮೀನು ಅರ್ಜಿ ವಿಚಾರಣೆ: ಅಪಹರಣದ ಯಾವುದೇ ಅಂಶಗಳು ಅನ್ವಯವಾಗಲ್ಲ- ಹೆಚ್.ಡಿ ರೇವಣ್ಣ ಪರ ವಕೀಲರ ವಾದ.

04:10 PM May 09, 2024 IST | prashanth
ಜಾಮೀನು ಅರ್ಜಿ ವಿಚಾರಣೆ  ಅಪಹರಣದ ಯಾವುದೇ ಅಂಶಗಳು ಅನ್ವಯವಾಗಲ್ಲ  ಹೆಚ್ ಡಿ ರೇವಣ್ಣ ಪರ ವಕೀಲರ ವಾದ

ಬೆಂಗಳೂರು,ಮೇ,9,2024 (www.justkannada.in): ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಬಂಧಿತರಾಗಿ ಜೈಲುಪಾಲಾಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ.

ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು ಶಾಸಕ ಹೆಚ್ ಡಿ ರೇವಣ್ಣ ಪರ ವಾದ ಮಂಡಿಸಿದ ವಕೀಲ ಸಿವಿ ನಾಗೇಶ್, ಹೆಚ್ ಡಿ ರೇವಣ್ಣ ಮಹಿಳೆಯನ್ನ ಅಪಹರಿಸಿಲ್ಲ.  ರೇವಣ್ಣ ಹೆಸರು ಬಳಸಿದ್ದಕ್ಕೆ ಅಪಹರಣ ಎಂದಿದ್ದಾರೆ . ಮಗನಿಗೆ ಸುಳ್ಳು ಹೇಳಿ ಕರೆದೊಯ್ದರೆ ಅಪಹರಣ ಅಲ್ಲ.  ರೇವಣ್ಣ ಹೇಳಿದ್ದಾರೆ ಅಂತ ಕರೆದೊಯ್ದರೇ ಅಪಹರಣ ಅಲ್ಲ.  ಸಿಎಂ ಹೇಳಿದ್ದಾರೆ ಎಂದು ಕರೆದೊಯ್ದರೆ ಅದು ಅಪಹರಣವೇ..? ಮೋಸವಿದೆಯೇ ಬಲಪ್ರಯೋಗವಿದೆಯೇ....? ಎಂದು ಪ್ರಶ್ನಿಸಿದರು.

365 ಅಕ್ರಮ ಬಂಧನದ ಸೆಕ್ಷನ್ ಕೂಡ ಅನ್ವಯವಾಗಲ್ಲ  ಯಾವುದೇ ಡಿಮಾಂಡ ಇಲ್ಲ ಬೇಡಿಕೆ ಇಲ್ಲ ಅಪಹರಣವೂ ಇಲ್ಲ ಅಕ್ರಮ ಬಂಧನವೂ ಇಲ್ಲ ಪೊಲೀಸರ ಸಿಆರ್ ಪಿಸಿ ಸೆಕ್ಷನ್ 161 ಎಂಬ ಅಸ್ತ್ರವಿದೆ. ನಾಳೆ ಯಾರಿಂದಲಾದರೂ ಹೇಳಿಕೆ ಪಡೆದು ಸಾಕ್ಷಿ ಸೃಷ್ಠಿಸಬಹುದು  ಚುನಾವಣೆ ವೇಳೆ ಈ ಎಫ್ ಐಆರ್ ದಾಖಲಾಗಿದೆ  ಹೆಚ್ ಡಿ ರೇವಣ್ಣ ರಾಜಕಾರಣಿ ರಾಜಕೀಯ ಪಕ್ಷದಲ್ಲಿದ್ದಾರೆ. ಇದರಲ್ಲಿ ಅಪಹರಣದ ಯಾವುದೇ ಅಂಶಗಳು ಅನ್ವಯವಾಗಲ್ಲ ಎಂದು ವಾದಿಸಿದರು.

Key words: Bail application - H.D. Revanna- court

Tags :

.