HomeBreaking NewsLatest NewsPoliticsSportsCrimeCinema

ಹಿಜಾಬ್ ನಿಷೇಧ ವಾಪಸ್ ಪಡೆದ್ರೆ ಕೇಸರಿ ಶಾಲು ಹಾಕುವಂತೆ ಕರೆ ಕೊಡ್ತೇವೆ- ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ.

12:35 PM Dec 23, 2023 IST | prashanth

ದಾವಣಗೆರೆ,ಡಿಸೆಂಬರ್,23,2023(www.justkannada.in): ಒಂದು ವೇಳೆ ಹಿಜಾಬ್ ನಿಷೇಧ ವಾಪಸ್ ಪಡೆದ್ರೆ ಕೇಸರಿ ಶಾಲು ಹಾಕಲು ನಾವು ಕರೆ ಕೊಡ್ತೇವೆ ಎಂದು ರಾಜ್ಯ ಸರ್ಕಾರಕ್ಕೆ  ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಹಿಜಾಬ್ ನಿಷೇಧ ವಾಪಸ್ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೆ ಈ ಕುರಿತು ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕುತ್ತಿದ್ದು ಇಂದು ಮಾತನಾಡಿದ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ, ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಶಾಲೆಗಳಿಗೆ ಬರುವ ಅವಕಾಶ ಕಲ್ಪಿಸಿದರೆ, ಬೇರೆ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬರಲು ನಾವೇ ಕರೆ ಕೊಡುತ್ತೇವೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವಿ ಇದ್ದಾರೆ. 13 ಸಲ ಬಜೆಟ್ ಮಂಡಿಸಿದವರು. ಶಾಲೆಗಳಲ್ಲಿ ಎಲ್ ಕೆಜಿಯಿಂದ ಕಾಲೇಜುವರೆಗೆ ಸಮವಸ್ತ್ರ ಕಡ್ಡಾಯ ಇದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇಲ್ಲ ಟಿಪ್ಪು ಸುಲ್ತಾನ್ ನೇತೃತ್ವದ ತುಘಲಕ್ ಸರ್ಕಾರವಿದೆ ಎಂದು ಕಿಡಿಕಾರಿದರು.

Key words: ban - hijab – withdrawn- we -call - saffron shawl- Former MLA-MP Renukacharya.

Tags :
ban - hijab – withdrawn- we -call - saffron shawl- Former MLA-MP Renukacharya.
Next Article