For the best experience, open
https://m.justkannada.in
on your mobile browser.

ಬಂಡೀಪುರ: ಅಳಿವಿನಂಚಿನಲ್ಲಿರುವ ಮಹಶೀರ್ ಮೀನು ಪತ್ತೆ.

10:49 AM Feb 23, 2024 IST | prashanth
ಬಂಡೀಪುರ  ಅಳಿವಿನಂಚಿನಲ್ಲಿರುವ ಮಹಶೀರ್ ಮೀನು ಪತ್ತೆ

ಗುಂಡ್ಲುಪೇಟೆ,ಫೆಬ್ರವರಿ,23,2024(www.justkannada.in): ಬಂಡೀಪುರದ ಮೋಯರ್ ನದಿಯಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಮಹಶೀರ್ ಮೀನು ಪತ್ತೆಯಾಗಿದೆ.

ಬಂಡೀಪುರ ಅರಣ್ಯ ಇಲಾಖೆ ಅಳಿವಿನಂಚಿನಲ್ಲಿರುವ ಅಪರೂಪದ ಮೀನು ಸಂರಕ್ಷಣೆಗೆ ಮುಂದಾಗಿದೆ. ಈ ನಡುವೆ ವೈಲ್ಡ್‌ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ವಿಜ್ಞಾನಿ ಜಾನ್ಸನ್ ಮತ್ತು ಕೊಯಮತ್ತೂರಿನ ಸಲೀಂ ಅಲಿ, ಸೆಂಟರ್‌ ನ ಜೀವ ವಿಜ್ಞಾನಿಗಳ ತಂಡ ಶೋಧನೆ ನಡೆಸಿದ್ದು ಮೋಯಾರ್ ಕಣಿವೆಯಲ್ಲಿ ಎರಡು ಬಾರಿ ಸರ್ವೇ ನಡೆಸಿದೆ. ಈ ವೇಳೆ ಅಳಿವಿನಂಚಿನಲ್ಲಿರುವ ಜೀವವೈವಿಧ್ಯತೆಗಳು ಪತ್ತೆಯಾಗಿವೆ.

ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಕಬಿನಿ, ನುಗು ಹಾಗೂ ಮೋಯಾರ್ ನದಿಗಳು ಹರಿಯುತ್ತವೆ. ಕಬಿನಿ ಮತ್ತು ನುಗುಗೆ ಪ್ರವಾಸಿಗರಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.  ಮೋಯಾರ್ ನದಿ ಮಾತ್ರ ಸಂಪೂರ್ಣ ಅರಣ್ಯದೊಳಗೆ ಹರಿಯುತ್ತಿರುವ ಕಾರಣ ಇಲ್ಲಿಗೆ ಪ್ರವೇಶ ನಿಷೇಧವಿದೆ. ಇದರ ಪರಿಣಾಮ ಮಹಶೀರ್ ತಳಿಯ ಹಂಬ್ ಬ್ಯಾಕ್ಸ್ ಮಹಶೀರ್, ಬ್ಲೂ ಪಿಂಡ್ ಮಹಶೀರ್ ಅಲ್ಲದೇ, ಸಂಪೂರ್ಣ ಕರ್ನಾಟಕದ್ದೇ ಆದ ಕರ್ನಾಟಿಕ್ ಮತ್ತು ನೀಲಗಿರಿಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ಮೀನುಗಳು ಪತ್ತೆಯಾಗಿವೆ.

ದೊಡ್ಡ ಪ್ರಮಾಣದಲ್ಲಿ ನೀರು ನಾಯಿಗಳ ಸಂತತಿ, ನಾಲ್ಕು ಕಡೆಗಳಲ್ಲಿ ಮೊಸಳೆಗಳೂ ಕಂಡುಬಂದಿವೆ. ಅಳಿವಿನಂಚಿನಲ್ಲಿ ಮಹಶೀರ್ ಹಂಪ್‌ ಬ್ಯಾಕ್ ಮಹಶೀರ್ ಕಾವೇರಿ ನದಿಯಲ್ಲಿ ಪಾತ್ರದಲ್ಲಿ ಕಂಡುಬರುವ ಸ್ಥಳೀಯ ಜಾತಿಯಾಗಿ ಮೀನಾಗಿದ್ದು,  ಈ ಮೀನು ಅಳಿವಿನಂಚಿನಲ್ಲಿವೆ.

Key words: Bandipur-Endangered- Mahseer –fish- found.

Tags :

.