HomeBreaking NewsLatest NewsPoliticsSportsCrimeCinema

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ

03:37 PM Aug 05, 2024 IST | prashanth

ಢಾಕಾ,ಆಗಸ್ಟ್,5,2024 (www.justkannada.in): ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಮೀಸಲಾತಿ ಗಲಭೆ ಹಿಂಸಾಚಾರ ತಡೆಯಲು ವಿಫಲರಾದ ಪ್ರಧಾನ ಮಂತ್ರಿ ಶೇಕ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಕುರಿತು ಸೇನಾ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದು, ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.  ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಶೀಘ್ರವೇ ಮಧ್ಯಂತರ ಸರ್ಕಾರ ರಚಿಸುತ್ತೇವೆ ಎಂದಿದ್ದಾರೆ. ಈಗಾಗಲೇ ಶೇಖ್ ಹಸೀನಾ ಅವರು ಢಾಕ ತೊರೆದಿದ್ದು, ಅಶ್ರಯ ಕೋರಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಾಂಗ್ಲಾದೇಶದಲ್ಲಿ ನಡೆದ ಘರ್ಷಣೆಗಳಿಂದ  ಹಲವು ಮಂದಿ ಸಾವನ್ನಪ್ಪಿದ್ದು, ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಕರೆ ನೀಡಿದ ಹತ್ತಾರು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು.  ಈ ನಡುವೆ ಢಾಕಾದಲ್ಲಿರುವ ಪ್ರಧಾನಿ ನಿವಾಸ ಗನಭವನಕ್ಕೆ ಉದ್ರಿಕ್ತರ ಗುಂಪು ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

Key words: Bangladesh, PM, Sheikh Hasina, resignation

Tags :
bangladeshPMresignationSheikh Hasina
Next Article