HomeBreaking NewsLatest NewsPoliticsSportsCrimeCinema

ಬನ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಜೆಡಿಎಸ್ ಬೆಂಬಲಿತ ನಿರ್ದೇಶಕರುಗಳಿಗೆ ಜಯ.

11:31 AM Jan 02, 2024 IST | prashanth

ಮೈಸೂರು,ಜನವರಿ,2,2024(www.justkannada.in): ಬನ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರುಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಬನ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ 13 ನಿರ್ದೇಶಕರ ಪೈಕಿ 13 ಸ್ಥಾನಕ್ಕೂ ಜೆಡಿಎಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ಕೃಷ್ಣೆಗೌಡ ತಂಡಕ್ಕೆ ಭರ್ಜರಿ ಜಯ ಸಿಕ್ಕಿದ್ದು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಈ ಕುರಿತು ಮಾತನಾಡಿದ ಬನ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಕೃಷ್ಣೆಗೌಡ, ಎಲ್ಲರ ಸಹಕಾರದಿಂದ ನಮ್ಮ ತಂಡಕ್ಕೆ ಗೆಲುವು ಸಿಕ್ಕಿದೆ. ಸಂಘದ ಅಭಿವೃದ್ಧಿ ಕೆಲಸದಲ್ಲಿ ಎಲ್ಲ ನಿರ್ದೇಶಕರ ಸಲಹೆ ಪಡೆದು ಕೆಲಸ ಮಾಡುತ್ತೇವೆ. ಸಂಘದ ಅಭಿವೃದ್ಧಿಗೆ ನಮ್ಮ ತಂಡ ಕೆಲಸ ಮಾಡಲಿದೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

Key words: Bannur -Milk –Co-op Elections- won- JDS- directors.

 

Tags :
Bannur -Milk –Co-op Elections- won- JDS- directors.
Next Article