HomeBreaking NewsLatest NewsPoliticsSportsCrimeCinema

ಡಿ. 4ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ- ಸಭಾಪತಿ ಬಸವರಾಜ ಹೊರಟ್ಟಿ

01:35 PM Nov 22, 2023 IST | prashanth

ಬೆಂಗಳೂರು,ನವೆಂಬರ್,22,2023(www.justkannada.in): ಡಿಸೆಂಬರ್ 14ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದರು.    

 ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ, ಬೆಳಗಾವಿ ಅಧಿವೇಶನದಲ್ಲಿ ಬರೀ ಪ್ರತಿಭಟನೆ ಆಗುತ್ತೆ ಅಂತ ಜನಪ್ರತಿನಿಧಿಗಳು ಅಂದುಕೊಳ್ಳುತ್ತಾರೆ.  ಸಿಎಂ ಸಿದ್ದರಾಮಯ್ಯ, ಸಚಿವರಾದ ಮಧು ಬಂಗಾರಪ್ಪ, ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆ ಆಗಬಾರದು. ರೈತರ ಜೊತೆಗೆ ಸಚಿವರು ಸಭೆ ನಡೆಸಲು ಸೂಚನೆ ನೀಡಿದ್ದೇನೆ. ಈಗಾಗಲೇ ಸುವರ್ಣಸೌಧದ ಮುಂದೆ ಟೆಂಟ್ ಹಾಕಲು ತಯಾರಾಗಿದ್ದಾರೆ ಎಂದು ತಿಳಿಸಿದರು.

 

ಅಧಿವೇಶನದಲ್ಲಿ ಜಪ್ರತಿನಿಧಿಗಳು ಸರಿಯಾದ ರೀತಿಯಲ್ಲಿ ನಡೆಯಬೇಕು. ರೈತರ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಸಭೆ ಕರೆಯಿರಿ. ರೈತರ ಬೇಡಿಕೆ ಏನಿದೆ ಅಂತ ಸಭೆಯಲ್ಲಿ ಚರ್ಚೆ ಮಾಡಿ ಬಗೆಹರಿಸಬೇಕು. ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಲು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು  ಬಸವರಾಜ ಹೊರಟ್ಟಿ ತಿಳಿಸಿದರು.

Key words: Belgaum- winter -session –dec  4th – Speaker- Basavaraj horatti

Tags :
Belgaum- winter -session –dec  4th – Speaker- Basavaraj horatti
Next Article