ಜನವರಿ 14ರಿಂದ ಕಾಂಗ್ರೆಸ್ ನಿಂದ ‘ಭಾರತ ನ್ಯಾಯ ಯಾತ್ರೆ’.
ನವದೆಹಲಿ,ಡಿಸೆಂಬರ್,27,2023(www.justkannada.in): ಕಳೆದ ವರ್ಷ ಭಾರತ್ ಜೋಡೋ ಯಾತ್ರೆ ನಡೆಸಿದ್ದ ಕಾಂಗ್ರೆಸ್ ಇದೀಗ ಅದೇ ಮಾದರಿಯಲ್ಲಿ ಭಾರತ ನ್ಯಾಯ ಯಾತ್ರೆ ನಡೆಸಲು ಮುಂದಾಗಿದೆ.
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಈ ಭಾರತ ನ್ಯಾಯ ಯಾತ್ರೆ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿದ್ಧತೆ ನಡೆಸಿದ್ದಾರೆ. ಜನವರಿ 14 ರಂದು ಭಾರತ ನ್ಯಾಯ ಯಾತ್ರೆ ಪ್ರಾರಂಭವಾಗಲಿದ್ದು, ಮಣಿಪುರದಿಂದ ಮುಂಬೈವರೆಗೆ ನಡೆಯಲಿದೆ. ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಿಂದ ಜನವರಿ 14 ರಂದು ಪ್ರಾರಂಭವಾಗುವ ಪಾದಯಾತ್ರೆಯು 30 ತಿಂಗಳವರೆಗೆ ಇರುತ್ತದೆ.
ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ. 6,200 ಕಿ.ಮೀ ರಾಹುಲ್ ಗಾಂಧಿ ಯಾತ್ರೆ ಸಾಗಲಿದೆ. 14 ರಾಜ್ಯಗಳ 85 ಜಿಲ್ಲೆಗಳಲ್ಲಿ ಸಂಚಾರ ನಡೆಯಲಿದೆ.
14 ರಾಜ್ಯ 85 ಜಿಲ್ಲೆಗಳು ಕಾಂಗ್ರೆಸ್ ನ ಈ ಭಾರತ ನ್ಯಾಯ ಯಾತ್ರೆ 14 ರಾಜ್ಯಗಳು ಮತ್ತು 85 ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ, ಬಿಹಾರ, ಜಾರ್ಖಂಡ್, ಬಂಗಾಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಯುಪಿ, ರಾಜಸ್ಥಾನ, ಗುಜರಾತ್ ಮತ್ತು ಮೂಲಕ ಮುಂಬೈ ತಲುಪಲಿದೆ. ಬಸ್ ಮೂಲಕ ಯಾತ್ರೆ ನಡೆಸಲಿದ್ದು, ಕೆಲವೆಡೆ ಕಾಲ್ನಡಿಗೆಯಲ್ಲಿಯೂ ಯಾತ್ರೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಭಾರತ ನ್ಯಾಯ ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ.
ಪಕ್ಷದ ಹೈಕಮಾಂಡ್ ಹೊರತುಪಡಿಸಿ, ಎಲ್ಲಾ ರಾಜ್ಯ ಕಾಂಗ್ರೆಸ್ ನಾಯಕರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಳೆದ ವರ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ನಡೆಸಿತ್ತು.
Key words: 'Bharat Nyaya Yatra-Congress - January 14.