HomeBreaking NewsLatest NewsPoliticsSportsCrimeCinema

ಭವಾನಿ ರೇವಣ್ಣ ಕಾರು ಮತ್ತು ಬೈಕ್ ನಡುವೆ ಅಪಘಾತ ಕೇಸ್: ಬೈಕ್ ಚಾಲಕನ ವಿರುದ್ದ ದೂರು ದಾಖಲು.

02:04 PM Dec 04, 2023 IST | prashanth
featuredImage featuredImage

ಮೈಸೂರು ,ಡಿಸೆಂಬರ್,4,2023(www.justkannada.in): ಭವಾನಿ ರೇವಣ್ಣ  ಅವರ ಕಾರು ಬೈಕ್ ನಡುವೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಚಾಲಕ ಶಿವಣ್ಣ ವಿರುದ್ದ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಕ್ ಚಾಲಕ ಶಿವಣ್ಣ ವಿರುದ್ದ ಭವಾನಿ ರೇವಣ್ಣ ಅವರ ಚಾಲಕ ಮಂಜುನಾಥ್‌  ಅವರು ಸಾಲಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೈಕ್ ಚಾಲಕ ಶಿವಣ್ಣ ವಿರುದ್ದ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಆರೋಪದಡಿ ಐಪಿಸಿ ಸೆಕ್ಷನ್ 279 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

01/12/2023ರಂದು ಮಧ್ಯಾಹ್ನ ಅಪಘಾತ ಸಂಭವಿಸಿತ್ತು.  12.45ರ ಸುಮಾರಿಗೆ ಕೆಲಸ ನಿಮಿತ್ತ ಸಾಲಿಗ್ರಾಮದ ಪ್ರಕಾಶ್ ಮನೆಗೆ ಹೋಗಿದ್ದೆ ವಾಪಸ್ಸು ಹೊಳೆನರಸೀಪುರಕ್ಕೆ ಹೊರಟಿದ್ದೆ ರಾಂಪುರ ಜಂಕ್ಷನ್ ಬಳಿ ಎದರುಗಡೆಯಿಂದ ಬಂದ ಬೈಕ್  ಕಾರಿಗೆ ಡಿಕ್ಕಿಯಾಗಿದೆ. ಅತಿ ವೇಗ ಹಾಗೂ ಅಜಾಗರೂಕತೆಯಿಂದ ಅಡ್ಡದಿಡ್ಡಿಯಾಗಿ ಬಂದು ಬೈಕ್ ಸವಾರ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಬೈಕ್ ಚಾಲಕ‌ ಕೆಳಗೆ ಬಿದ್ದ ಆದರೆ ಆತನಿಗೆ ಯಾವುದೇ ಗಾಯ ಆಗಿಲ್ಲ. ಕಾರಿನ ಬಂಪರ್ ಬ್ಯಾನೆಟ್ ನಂಬರ್ ಪ್ಲೇಟ್ ಮುಂಭಾಗದ ಬಿಡಿ ಭಾಗಗಳು ಜಖಂ ಆಗಿದೆ. ಶಿವಣ್ಣ ವಿರುದ್ದ ಕಾನೂನು ಕ್ರಮ‌ಕೈಗೊಳ್ಳಿ  ಎಂದು ಕಾರು ಚಾಲಕ ಮಂಜುನಾಥ ಆರೋಪಿಸಿ ದೂರು ದಾಖಲಿಸಿದ್ದಾರೆ.

Key words: Bhavani Revanna- car –bike- Accident -case - complaint -against - bike rider

Tags :
againstBhavani Revanna- car –bike- Accident -caseBike ridercomplaint