ಭವಾನಿ ರೇವಣ್ಣ ಜಾಮೀನು : ಅರ್ಜಿ ವಿಚಾರಣೆಗೆ ಕ್ಷಣಗಣನೆ..
The anticipatory bail plea of Bhavani Revanna, wife of former minister Revanna, who is accused of kidnapping the victim of the rape case against Prajwal Revanna, will be heard today
ಬೆಂಗಳೂರು, ಮೇ.29,2024: (www.justkannada.in news) ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದ ಸಂತ್ರಸ್ತೆ ಕಿಡ್ನ್ಯಾಪ್ ಆರೋಪ ಹೊತ್ತಿರುವ ಮಾಜಿ ಸಚಿವ ರೇವಣ್ಣ ಮಡದಿ ಭವಾನಿ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಪ್ರಜ್ವಲ್ ರೇವಣ್ಣ ಅವರ ತಾಯಿಯೂ ಆದ ಭವಾನಿ ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು, - 'ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ : ವಿಚಾರಣೆ'ಯ ವಿಶೇಷ ನ್ಯಾಯಾಲಯದ (ಸಿಸಿಎಚ್-82) ನ್ಯಾಯಾಧೀಶ ಸಂತೋಷ ಗಜಾನನ ಭಟ್ ಮಂಗಳವಾರ ವಿಚಾರಣೆ ನಡೆಸಿದ್ದರು.
ಭವಾನಿ ರೇವಣ್ಣ ಪರ ಹೈಕೋರ್ಟ್‌ನ ಹಿರಿಯ ವಕೀಲ ಸಂದೇಶ್ ಜೆ.ಚೌಟ ವಾದ ಮಂಡಿಸಿದ್ದರು.
ಈ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಕಾಲವಕಾಶ ಕೇಳಿದ ಎಸ್‌ಐಟಿ ಮನವಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮನ್ನಿಸಿದ್ದು, ವಿಚಾರಣೆ ಇಂದಿಗೆ (ಮೇ 29) ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರಿಗೆ ನ್ಯಾಯಾಲಯ ಜಾಮೀನು ನೀಡುತ್ತದೆಯೋ ಅಲ್ಲ ಅರ್ಜಿ ವಜಾಗೊಳಿಸುತ್ತದೆಯೋ ಅನ್ನೋದು ಕೆಲ ಸಮಯಗಳಲ್ಲಿ ನಿರ್ಧಾರವಾಗಲಿದೆ.
key words: Bhavani Revanna, surety Application, Hearing today
SUMMARY:
Bengaluru: The anticipatory bail plea of Bhavani Revanna, wife of former minister Revanna, who is accused of kidnapping the victim of the rape case against Prajwal Revanna, will be heard today
The Special Court of People's Representatives yesterda̧y allowed the plea of the SIT seeking time to file objections related to the anticipatory bail application filed by Bhavani Revanna on charges of kidnapping a victim and adjourned the hearing to Wednesday
The petition filed by Prajwal Revanna's mother Bhavani Revanna in this regard was heard on Tuesday 4 by Judge Santosh Gajanana Bhat of the Special Court (CCH-82) for 'Criminal Cases Against Legislators-Parliamentarians: Inquiry'. Sandesh J. Chowta, senior advocate of the High Court, presented the argument.