ಬಿಡದಿಯನ್ನು ಗ್ರೇಟರ್ ಬೆಂಗಳೂರು ಮಾಡುವ ವಿಚಾರ : ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್.
05:33 PM Nov 10, 2023 IST
|
veerabhadra
ಬೆಂಗಳೂರು,ನವೆಂಬರ್,10,2023(www.justkannada.in): ಬಿಡದಿಯನ್ನು ಗ್ರೇಟರ್ ಬೆಂಗಳೂರು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ರಾಮನಗರವನ್ನು ಬೆಂಗಳೂರು ಬದಲು ಡೆಲ್ಲಿ ಎಂದು ಹೆಸರಿಡಿ, ಯಾರು ಬೇಡ ಅಂದವರು. ಆಗ ಇನ್ನೂ ವಿಶ್ವಮಟ್ಟದಲ್ಲಿ ಹೆಸರಾಗುತ್ತಲ್ಲ. ಹೆಸರು ಬದಲಾವಣೆ ಮಾಡೋದ್ರಿಂದ ಏನೂ ಬದಲಾಗಲ್ಲ ಎಂದು ಕಿಡಿಕಾರಿದರು. ಸ್ವಲ್ಪ ಮಳೆ ಆದಾಗ ನೋಡಿದ್ರಲ್ಲ ಎಂತಹ ಗ್ರೇಟರ್ ಬೆಂಗಳೂರು ಮಾಡಿದ್ದಾರೆ ಎಂದು ಹರಿಹಾಯ್ದರು.
ರಾಮನಗರವನ್ನು ಬೆಂಗಳೂರಿನೊಂದಿಗೆ ಸೇರಿಸಲಾಗುವುದು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಇದೀಗ ಬೆಂಗಳೂರಿನ ನಮ್ಮ ಮೆಟ್ರೋವನ್ನು ಬಿಡದಿವರೆಗೂ ವಿಸ್ತರಿಸಲಾಗುವುದು ಮತ್ತು ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು.
Key words: Bidadi -Greater Bangalore-Former CM -HD Kumaraswamy
Next Article