HomeBreaking NewsLatest NewsPoliticsSportsCrimeCinema

ಬೈಕ್‌ ಹಿಂಬದಿ ಸವಾರ ಸಾವು – ಪರಿಹಾರಕ್ಕೆ ಮಾಲೀಕನಿಗೆ ಆದೇಶ.

05:55 PM Dec 29, 2023 IST | prashanth

ಬೆಂಗಳೂರು,ಡಿಸೆಂಬರ್,29,2023(www.justkannada.in):   ದ್ವಿಚಕ್ರವಾಹನದಲ್ಲಿಒಂದು ವೇಳೆ ಅಪಘಾತ ಸಂಭವಿಸಿ ಹಿಂಬದಿ ಸವಾರ ಮೃತಪಟ್ಟರೆ  ಇವರ ಸಾವಿಗೆ ಬೈಕ್‌ ಮಾಲೀಕನೇ ಪರಿಹಾರ ನೀಡಬೇಕು ಎಂದು ರಾಜ್ಯ ಹೈಕೋರ್ಟ್‌ ಆದೇಶ ನೀಡಿದೆ.

ದ್ವಿಚಕ್ರ ವಾಹನದಲ್ಲಿ ಅಪಘಾತದಲ್ಲಿ ಹಿಂಬದಿ ಸವಾರ ಕೊನೆಯುಸಿರೆಳೆದರೆ ಈ ಸಾವಿಗೆ ಪರಿಹಾರವನ್ನು ಬೈಕ್‌ ಸವಾರನೇ  ನೀಡಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಕುಣಿಗಲ್‌ ಬಳಿ ಬೈಕ್‌ವೊಂದರ ಹಿಂಬದಿಯಲ್ಲಿ ಸಿದ್ದಿಕ್‌ ಉಲ್ಲಾಖಾನ್‌ ಎಂಬುವರು ಕುಳಿತು ಸಂಚರಿಸುತ್ತಿದ್ದರು. ನಿಜಾಮುದ್ದೀನ್‌ ಎಂಬುವರ ಈ ಬೈಕ್‌ ಅಪಘಾತಕ್ಕೀಡಾಗಿ ಸಿದ್ದಿಕ್‌ ಉಲ್ಲಾಖಾನ್‌ ಮೃತಪಟ್ಟಿದ್ದರು. ತುಮಕೂರಿನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣ ವಿಮಾ ಸಂಸ್ಥೆಗೆ ಪರಿಹಾರ ವಿತರಿಸಬೇಕೆಂದು ಆದೇಶಿಸಿತ್ತು.  ಹೈಕೋರ್ಟ್‌ ಈ ಆದೇಶವನ್ನು ರದ್ದುಪಡಿಸಿದೆ.

ನ್ಯಾಯಾಧಿಕರಣ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಮೃತ ಸಿದ್ದಿಕ್‌ ಉಲ್ಲಾಖಾನ್‌ ಅವರ ಕುಟುಂಬದವರಿಗೆ ನೀಡುವಂತೆ ಬೈಕ್‌ ಮಾಲೀಕ  ನಿಜಾಮುದ್ದೀನ್‌ ಅವರಿಗೆ ಹೈಕೋರ್ಟ್‌ ಸೂಚಿಸಿದೆ.

ವಾಹನವು ಎರಡು ಆಸನವನ್ನು ಹೊಂದಿದೆ. ಇದರ ಆಧಾರದ ಮೇಲೆ ನ್ಯಾಯಾಧಿಕರಣವು ವಿಮಾ ಕಂಪನಿಗೆ ಪರಿಹಾರ ನೀಡಬೇಕೆಂದು ಹೇಳಿದೆ. ಇದು ಸೂಕ್ತವಲ್ಲ. ಬೈಕ್‌ ಮಾಲೀಕನೇ ಪರಿಹಾರ ನೀಡಬೇಕೆಂದು ಹೈಕೋರ್ಟ್‌ ತೀರ್ಪು ನೀಡಿದೆ.

 

ಕೃಪೆ..

ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Key words: Bike –back- rider- death –owner – compensation- high court

Tags :
Bike –back- rider- death –ownercompensationHigh Court
Next Article