For the best experience, open
https://m.justkannada.in
on your mobile browser.

ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

10:28 AM Aug 12, 2024 IST | prashanth
ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ  ಇಬ್ಬರು ಸಾವು

ತುಮಕೂರು,ಆಗಸ್ಟ್,12,2024 (www.justkannada.in): ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತಿಪಟೂರು ತಾಲೂಕಿನ ಜೈಪುರ ಗೇಟ್ ಬಳಿ ಈ ಘಟನೆ ನಡೆದಿದ್ದು. ಹೊಳೆನರಸಿಪುರ ತಾಲೂಕಿನ ಕಳ್ಳಿ ಗ್ರಾಮದ ನವೀನ್ (28) ಹಾಗೂ ತಿಪಟೂರು ತಾಲೂಕಿನ ಗಂಗನಘಟ್ಟದ ಶೇಷಾದ್ರಿ (47) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಸಚಿನ್  ಎಂಬ ಯುವಕನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: bikes, collided, Two death

Tags :

.