ರಾಜ್ಯಪಾಲರಿಂದ ಬಿಲ್ ಗಳು ವಾಪಸ್ : ‘ಕೈ’ ಸರ್ಕಾರದ ಆರೋಪಕ್ಕೆ ಆರ್.ಅಶೋಕ್ ತಿರುಗೇಟು
ಬೆಂಗಳೂರು,ಆಗಸ್ಟ್,24,2024 (www.juskannada.in): ರಾಜ್ಯಪಾಲರು ಕಾಂಗ್ರೆಸ್ ಸರ್ಕಾರದ ವಿರುದ್ದವಿದ್ದು, ಬಿಲ್ ಗಳನ್ನ ವಾಪಸ್ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕರಿಗೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಆರ್.ಅಶೋಕ್, ಅಧಿವೇಶನದಲ್ಲಿ ಚರ್ಚ ಆಗುವ ವಿದೇಯಕ ಬಗ್ಗೆ ರಾಜ್ಯಪಾಲರಿಗೆ ಸಾರ್ವಜನಿಕವಾಗಿ ದೂರು ಕೊಟ್ಟಿರುತ್ತಾರೆ. ಸಮಸ್ಯೆ ಆಗಿರುವ ವಿದೇಯಕಗಳ ಬಗ್ಗೆ ದೂರು ಕೊಟ್ಟಿರುತ್ತಾರೆ. ಆನೇಕ ಮಸೂದೆಗಳ ಬಗ್ಗೆ ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳಿಂದ ದೂರು ಬಂದಿರುತ್ತೆ. ಸಾರ್ವಜನಿಕರು ಕೊಟ್ಟಿರುವ ದೂರು ಆಧರಿಸಿ ಸರ್ಕಾರಕ್ಕೆ ಸ್ಪಷ್ಟನೆ ಕೇಳುವ ಸರ್ಕಾರಕ್ಕೆ ತಿಳಿ ಹೇಳುವ ಅಧಿಕಾರ ರಾಜ್ಯಪಾಲರಿಗಿದೆ ಎಂದು ಟಾಂಗ್ ಕೊಟ್ಟರು.
ಇದನ್ನ ಈವರೆಗಿನ ಎಲ್ಲಾ ರಾಜ್ಯಪಾಲರು ಮಾಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಹತ್ತಾರು ಬಿಲ್ ವಾಪಸ್ ಕಳಿಹಿಸಲಾಗಿದೆ. ಈ ಹಿಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಜ್ ಸಹ ಬಿಲ್ ವಾಪಸ್ ಕಳುಹಿಸಿದ್ದರು ಎಂದರು.
ಇನ್ನು ರಾಜಭವನ ಬಿಜೆಪಿ ಕಚೇರಿ ಎಂಬ ಮಾತು ಸಾಮಾನ್ಯವಾದದ್ದು. ರಾಜ್ಯಪಾಲರ ಬಗ್ಗೆ ಕಾಂಗ್ರೆಸ್ ಗೌರವವಿಲ್ಲ ಎಂದು ಆರ್.ಅಶೋಕ್ ಕಿಡಿಕಾರಿದರು.
Key words: Bills, returned, governor, government, R. Ashok