For the best experience, open
https://m.justkannada.in
on your mobile browser.

ಶೌಚಾಲಯಕ್ಕೆ ತೆರಳಿದ್ದ ವ್ಯಕ್ತಿ ವೃಷಣಗಳ ಕಚ್ಚಿ ಹಿಡಿದ ಪೈಥಾನ್..!‌

12:35 PM Aug 22, 2024 IST | mahesh
ಶೌಚಾಲಯಕ್ಕೆ ತೆರಳಿದ್ದ ವ್ಯಕ್ತಿ ವೃಷಣಗಳ ಕಚ್ಚಿ ಹಿಡಿದ ಪೈಥಾನ್   ‌

ಥಾಯ್ಲೆಂಡ್‌, ಆ.22,2024: (www.justkannada.in news)  ಶೌಚಕ್ಕೆ ತೆರಳಿದ್ದ ವ್ಯಕ್ತಿಯ ವೃಷಣಗಳನ್ನು ಕಮೋಡ್ ನಲ್ಲಿ ಅಡಗಿದ್ದ ಹಾವೊಂದು ಕೆಲ ಕಾಲ ಬಿಗಿಯಾಗಿ ಕಚ್ಚಿ ಹಿಡಿದ ಆಘಾತಕಾರಿ ಘಟನೆ ನಡೆದಿದೆ.

ಸ್ಥಳೀಯ ನಿವಾಸಿ ಥಾನಾತ್ ತಂಗ್ಟೆವಾನಾನ್ ಎಂಬುವವರೇ ಹಾವಿನ ದಾಳಿಗೆ ತುತ್ತಾಗಿ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾದವರು.

“ ಮೇಲ್ ಆನ್‌ಲೈನ್” ನ್ಯೂಸ್‌ ಪೋರ್ಟಲ್‌ ವರದಿ ಪ್ರಕಾರ,   12 ಅಡಿ ಉದ್ದದ ಹೆಬ್ಬಾವೊಂದು ಅವರ ನಿವಾಸ ಕಮೋಡ್‌ ನಲ್ಲಿ ಅಡಗಿತ್ತು. ಈ ಬಗ್ಗೆ ಮಾಹಿತಿ ಇರದ ಥಾನಾತ್‌ ತಂಗೈವಾನಾನ್‌, ಮಾಮೂಲಿಯಂತೆ ಶೌಚಾಲಯಕ್ಕೆ ತೆರಳಿದ್ದಾರೆ. ಕಮೋಡ್‌ ಮೇಲೆ ಕುಳಿತುಕೊಂಡ ತಕ್ಷಣ ವೃಷಣಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತು.

'ನನ್ನ ವೃಷಣಗಳನ್ನು ಏನೋ ಕಚ್ಚುತ್ತಿದೆ ಎಂದು ನಾನು ಭಾವಿಸಿದೆ. ಇದು ತುಂಬಾ ನೋವಿನಿಂದ ಕೂಡಿತ್ತು. ಯಾಕೆ ಹೀಗಾಗುತ್ತಿದೆ ಎಂದು ನೋಡಲು ಕಮೋಡ್‌ ಗೆ ಕೈ ಹಾಕಿದೆ. ಆಗ ನನ್ನ ಕೈಗೆ ಹಾವು  ಸಿಕ್ಕಿತು. ಇದರಿಂದ ಕೆಲ ಕ್ಷಣ ನಾನು ತೀವ್ರ  ಆಘಾತಕ್ಕೊಳಗಾದೆ.

ನಂತರ ಸಾವರಿಸಿಕೊಂಡ ಥಾನತ್, ಟಾಯ್ಲೆಟ್ ಬ್ರಷ್ ಅನ್ನು ಎತ್ತಿಕೊಂಡು ಹಾವು ಸಾಯುವವರೆಗೂ  ಹೊಡೆದರು ಎಂದು ವರದಿ ತಿಳಿಸಿದೆ.

Key words: Thailand, Thanat Thangtewanon, bitten,testicles,12-foot python.

SUMMARY: 

In Thailand, Thanat Thangtewanon was bitten on the testicles by a 12-foot python. He described feeling intense pain as soon as he sat down and discovered the snake when he reached into the toilet.  According to the Mail Online, Thanat said: 'I felt something biting my balls. It was very painful, so I put my hands in the toilet to see what was wrong. I was shocked that I grabbed a snake’.  Thanat then picked up a toilet brush and began viciously beating the snake until it died.

Tags :

.