For the best experience, open
https://m.justkannada.in
on your mobile browser.

ಮೈಸೂರಿನಲ್ಲಿಂದು ವಿಪಕ್ಷ ಹಾಗೂ ಆಡಳಿತ ಪಕ್ಷದ ಪ್ರತಿಭಟನೆ: ಪೊಲೀಸ್ ಬಿಗಿ ಭದ್ರತೆ

10:26 AM Jul 12, 2024 IST | prashanth
ಮೈಸೂರಿನಲ್ಲಿಂದು ವಿಪಕ್ಷ ಹಾಗೂ ಆಡಳಿತ ಪಕ್ಷದ ಪ್ರತಿಭಟನೆ  ಪೊಲೀಸ್ ಬಿಗಿ ಭದ್ರತೆ

ಮೈಸೂರು,ಜುಲೈ,12,2024 (www.justkannada.in): ಮುಡಾ‌ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಇಂದು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿ ಆಡಳಿತರೂಢ ಕಾಂಗ್ರೆಸ್ ಪಕ್ಷ ಸಹ ಧರಣಿ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಮುಡಾ ಕಚೇರಿ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ಮುಡಾ ಕಚೇರಿ ಸುತ್ತಮುತ್ತ ಬ್ಯಾರೀಕೇಡ್ ಅಳವಡಿಕೆ ಮಾಡಲಾಗಿದ್ದು, ಮುಡಾ ಸುತ್ತಮುತ್ತಲ ರಸ್ತೆಗಳನ್ನ ಕಂಪ್ಲೀಟ್ ಬಂದ್ ಮಾಡಲಾಗುತ್ತಿದೆ. ದೊಡ್ಡ ಮಟ್ಟದ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಲಾಗಿದೆ.

10 ಕೆಎಸ್‌ಆರ್‌ಪಿ ತುಕಡಿ ಸೇರಿ 500ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗಾಗಿ  ನಿಯೋಜನೆ ಮಾಡಲಾಗಿದೆ. ಮುಡಾ ಭ್ರಷ್ಟಾಚಾರ ಪ್ರಕರಣವನ್ನ ಸಿಬಿಐ ತನಿಖೆಗೆ ಒತ್ತಾಯಿಸಿ ಬಿಜೆಪಿಯಿಂದ ಮುಡಾ ಮುತ್ತಿಗೆ ಕಾರ್ಯಕ್ರಮ ಹಾಕಿಕೊಂಡಿದೆ.  ಮಹಾರಾಜ ಕಾಲೇಜು ಮೈದಾನದಿಂದ ಮುಡಾ ಬಳಿ ಪ್ರತಿಭಟನೆಗೆ ಬಿಜೆಪಿ ತೆರಳಲಿದ್ದು, ಮಹಾರಾಜ ಕಾಲೇಜು ಮೈದಾನದಲ್ಲೆ ಪ್ರತಿಭಟನಾಕಾರರನ್ನು ತಡೆದು ನಿಲ್ಲಿಸಲು ಪೊಲೀಸರ ಪ್ಲಾನ್ ರೂಪಿಸಿದ್ದಾರೆ.

ಮತ್ತೊಂದೆಡೆ ಮುಡಾ ಕಚೇರಿ ಪಕ್ಕದಲ್ಲೆ ಧರಣಿಗೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ ಪ್ರತಿಭಟನೆ ಖಂಡಿಸಿ ಸರ್ಕಾರದ ಪರ ಕಾಂಗ್ರೆಸ್ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಗೆ ಶಾಮಿಯಾನ ಹಾಕಿ, ಮೈಕ್ ಗಳನ್ನ ಕಟ್ಟಿ ಧರಣಿಗೆ ಸಿದ್ದತೆ ಮಾಡಲಾಗಿದೆ. ಎರಡು ಪಕ್ಷಗಳಿಂದ ಪ್ರತಿಭಟನೆ ಹಿನ್ನಲೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರಿಂದ ಬಿಗಿ ಕ್ರಮ ಕೈಗೊಂಡಿದ್ದಾರೆ.

Key words: bjp, congress, protest, Mysore, Police, security

Tags :

.