HomeBreaking NewsLatest NewsPoliticsSportsCrimeCinema

ಚುನಾವಣೋತ್ತರ ಸಮೀಕ್ಷೆ ಎಂದಿಗೂ ಸುಳ್ಳಾಗುವುದಿಲ್ಲ: ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ನಿಶ್ಚಿತ- ಮಾಜಿ ಮೇಯರ್ ಶಿವಕುಮಾರ್

01:31 PM Jun 03, 2024 IST | prashanth

ಮೈಸೂರು,ಜೂನ್,3,2024 (www.justkannada.in): ಚುನಾವಣೋತ್ತರ ಸಮೀಕ್ಷೆಗಳು ಎಂದಿಗೂ ಸುಳ್ಳಾಗುವುದಿಲ್ಲ. ಮತ್ತೆ ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬರುವುದು ನಿಶ್ಚಿತ ಎಂದು ಮೈಸೂರು ಮಹಾನಗರ ಪಾಲಿಎ ಮಾಜಿ ಮೇಯರ್ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಿವಕುಮಾರ್,  ಪ್ರಜ್ಞಾವಂತ ಮತದಾರ ಪ್ರಭುಗಳು ದೇಶದ ಭದ್ರತೆ ದೃಷ್ಟಿಯಿಂದ ಮತ್ತು ದೇಶ ಜಾಗತಿಕ ಮಟ್ಟದಲ್ಲಿ ವಿಶ್ವಗುರು ಆಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.  ಅದಕ್ಕಾಗಿ ಪ್ರಧಾನಿ ಮೋದಿ ಅವರ ನೇತೃತ್ವದ ಬಿಜೆಪಿಯ‌ನ್ನ ಮೂರನೇ ಬಾರಿ ಬೆಂಬಲಿಸುತ್ತಿರುವುದು ಅತ್ಯಂತ ಸಂತೋಷದಾಯಕ ವಿಚಾರ ಎಂದರು.

ಎನ್ ಡಿಎ ಮೈತ್ರಿ ಕೂಟವನ್ನ ಸೋಲಿಸಲೇಬೇಕು ಎಂದು ಹೊರಟ ಇಂಡಿಯಾ ಮೈತ್ರಿಕೂಟದ ಪರಿಸ್ಥಿತಿ ಅಯೋಮಯವಾಗಿದೆ. ಅವರ ಮುಖ ನೋಡಲಿಕ್ಕೆ ಆಗುತ್ತಿಲ್ಲ. ದೇಶದಲ್ಲಿ ಜನ ಮತ್ತೊಮ್ಮೆ ಮೋದಿ ಅವರನ್ನ ಪ್ರಧಾನಿಯಾಗಿ ಕಾಣಲು ಉತ್ಸುಕರಾಗಿದ್ದಾರೆ. ಮೋದಿ ಅವರ 400 ಸ್ಥಾನಗಳ ಗೆಲ್ಲುವ ಗುರಿಯೊಂದಿಗೆ ಮತ್ತೆ ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬರುವುದು ನಿಶ್ಚಿತ. ಹಾಗಾಗಿ ನಮಗೆ ಬಹಳ ಸಂತೋಷವಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಎಂದಿಗೂ ಸುಳ್ಳಾಗೋದಿಲ್ಲ. 13 ಸಂಸ್ಥೆಗಳು ಸಮೀಕ್ಷೆ ಮಾಡಿವೆ.  ಎಲ್ಲವು ಬಿಜೆಪಿ ಪರವಾದ ಅಭಿಪ್ರಾಯವನ್ನೇ ಮಂಡಿಸಿವೆ ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಶಿವಕುಮಾರ್ ತಿಳಿಸಿದರು.

Key words: BJP, government , Former Mayor,  Shivakumar

Tags :
BJP- government - again - Former Mayor- Shivakumar
Next Article