For the best experience, open
https://m.justkannada.in
on your mobile browser.

ಬಿಜೆಪಿ ನಾಯಕರೇ ಕೋಮು ಗಲಭೆಗೆ ಕಾರಣಕರ್ತರು: ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ- ಎಂ.ಲಕ್ಷ್ಮಣ್

01:56 PM Sep 13, 2024 IST | prashanth
ಬಿಜೆಪಿ ನಾಯಕರೇ ಕೋಮು ಗಲಭೆಗೆ ಕಾರಣಕರ್ತರು  ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ  ಎಂ ಲಕ್ಷ್ಮಣ್

ಮೈಸೂರು,ಸೆಪ್ಟಂಬರ್,13,2024 (www.justkannada.in): ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆ  ಬಿಜೆಪಿ, ಜೆಡಿಎಸ್, ಆರ್ ಎಸ್ ಎಸ್ ಅವರು ಮಾಡಿದ ಪೂರ್ವನಿಯೋಜಿತ ಕೃತ್ಯ. ಬಿಜೆಪಿ ನಾಯಕರಾದ ಬಿವೈ ವಿಜಯೇಂದ್ರ, ಆರ್. ಅಶೋಕ್, ಸಿ.ಟಿ.ರವಿ, ಅಶ್ವಥ್ ನಾರಾಯಣ್ ವಿರುದ್ಧ ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.

ನಾಗಮಂಗಲ ಗಲಭೆ ವಿಚಾರ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಇದು ಗಣೇಶ ಹಬ್ಬದ ದಿನ ಗಲಭೆ ಸೃಷ್ಟಿ ಮಾಡುವ ಹುನ್ನಾರ ಮಾಡಲಾಗಿದೆ. ಈ ಹುನ್ನಾರವನ್ನ ಆರ್.ಎಸ್‌.ಎಸ್ ಬಿಜೆಪಿ ಜೆ.ಡಿ.ಎಸ್ ನವರು ಮಾಡಿದ್ದಾರೆ. ಅದನ್ನ ಫೆಲ್ಯೂರ್ ಮಾಡಲು ಕಾಂಗ್ರೆಸ್ ಸಕ್ಸಸ್ ಆಗಿದೆ. ನಾಗಮಂಗಲದಲ್ಲಿ ಗಲಭೆ ಮಾಡಿ ಸ್ವಲ್ಪ ಸಕ್ಸಸ್ ಆಗಿದ್ದಾರೆ. ಮೊದಲು ಮೈಸೂರಿನಲ್ಲಿ ಕೋಮು ಗಲಭೆ‌ ಮಾಡಲು ಪ್ಲಾನ್ ಮಾಡಿದ್ದರು. ಅವರ ಪ್ಲಾನ್ ಮೈಸೂರಿನಲ್ಲಿ ಫೆಲ್ಯೂರ್ ಆಗಿದೆ‌ ಎಂದರು.

ನಾಗಮಂಗಲ ಕೃತ್ಯದಲ್ಲಿ ಭಾಗಿಯಾದವರು ಯುವಕರು. 20 ಜನ ಹಿಂದೂಗಳು 30 ಜನರು ಮುಸ್ಲಿಂರು ಭಾಗಿಯಾಗಿದ್ದಾರೆ. ಬಿಜೆಪಿ ಜೆಡಿಎಸ್ ಆರ್.ಎಸ್.ಎಸ್ ನವರು ಮಾಡಿದ ಪೂರ್ವನಿಯೋಜಿತ ಕೃತ್ಯ. ಇವರು ಪ್ಲಾನ್ ಮಾಡಿದ ದಾಖಲೆಗಳನ್ನ ಗೃಹ ಸಚಿವರು ಬಿಡುಗಡೆ ಮಾಡುತ್ತಾರೆ. ಗಲಭೆಯಾದ ಮೇಲೆ ನಾಗಮಂಗಲಕ್ಕೆ ಹೋಗಿ ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ‌. ವಿಜಯೇಂದ್ರ, ಅಶೋಕ್ ಅವರು ಒಂದು ಸಮುದಾಯದ  ಗುರಿಯಾಗಿಸಿಕೊಂಡು ತುಚ್ಯವಾಗಿ ಬೈಯ್ದಿದ್ದಾರೆ. ಇವರ ವಿರುದ್ಧ ಗುಂಡಾ ಕಾಯಿದೆ ಅಡಿ ಪ್ರಕರಣ ದಾಖಲು ಮಾಡಬೇಕು ಎಂದು  ಎಂ. ಲಕ್ಷ್ಮಣ್ ಗಂಭೀರ ಅರೋಪ ಮಾಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ 757 ಕೋಮುಗಲಭೆಗಳು

ಬಿಜೆಪಿ ಸರ್ಕಾರದ ಅವಧಿಯಲ್ಲಿ 757 ಕೋಮುಗಲಭೆ ನಡೆದಿದೆ. ದೇಶದಲ್ಲೆ ಕರ್ನಾಟಕ ಎರಡನೇ ಸ್ಥಾನ. ಕೋಮು ಗಲಭೆಯಲ್ಲಿ ಹಿಂದೂ ಸಂಘಟನೆ ಕುಮ್ಮಕ್ಕೇ ಹೆಚ್ಚು ಇದೆ‌. 21 ಯುವಕರು ಸಾವನಪ್ಪಿದ್ದಾರೆ. ಅವರೆಲ್ಲ ಬಿಲ್ವಾ ಸಮುದಾಯದವರಾಗಿದ್ದಾರೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡುವುದು ಬಿಜೆಪಿ ಉದ್ದೇಶ. ಹಿಂದೂಗಳ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇವರ ವಿರುದ್ಧ ಗೂಂಡಾ ಕಾಯಿದೆ ಅಡಿಯಲ್ಲಿ ದೂರು ದಾಖಲು ಮಾಡಬೇಕು. ಕಾಂಗ್ರೆಸ್ ನವರು ಇದ್ದರೂ ಅವರ ವಿರುದ್ಧ ಕೇಸ್ ದಾಖಲಿಸಿ. ನಾವು ಹಿಂದೂಗಳನ್ನೆ ಟಾರ್ಗೆಟ್ ಮಾಡಿಲ್ಲ. 30 ಜನರು ಮುಸ್ಲಿಂರ ಮೇಲೆ ದೂರು ದಾಖಲಾಗಿಲ್ಲ. ಜೈ ಶ್ರೀರಾಮ್ ಎಂದು ಅಲ್ಲೆ ಏಕೆ ಕೂಗಬೇಕು. ಇದು ಉದ್ದೇಶ ಪೂರ್ವಕವಾಗಿ ಮಾಡಿದ ಕೃತ್ಯ ಎಂದು ಆರೋಪಿಸಿದರು.

ಉತ್ತರ ಪ್ರದೇಶದಲ್ಲಿ ಪ್ರತಿದಿನ 7ರಿಂದ 8 ಅತ್ಯಾಚಾರ, ಕೋಮುಗಲಭೆ ಆಗುತ್ತಿದೆ. ಇದು ಬಿಜೆಪಿ ಅವರಿಗೆ ಕಾಣಿಸುತ್ತಿಲ್ಲ. ಬಿಜೆಪಿ ಬೆಂಬಲದಿಂದ ಕುಮಾರಸ್ವಾಮಿ ಗೆದ್ದ ನಂತರ ಮಂಡ್ಯ ನೆಮ್ಮದಿ ಹಾಳಾಗಿದೆ. ಮುಂದೆಯೂ ನೆಮ್ಮದಿ ಇರುವುದಿಲ್ಲ. ಕುಮಾರಸ್ವಾಮಿ ಕೋಮುಗಲಭೆ ಪರವಾಗಿ ಮಾತನಾಡುತ್ತಿದ್ದಾರೆ. ಇದು ದುರ್ದೈವದ ಸಂಗತಿ. ಪೊಲೀಸ್ ಇಲಾಖೆ ತಪ್ಪು ಮಾಡಿದ್ರೂ ಅವರ ವಿರುದ್ಧ ಕ್ರಮ‌ವಹಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ಕೆಲಸ ಮಾಡಲು ಬಿಡುತ್ತಿಲ್ಲ. ದಿನ ಒಂದಿಲ್ಲೊಂದು ವಿಚಾರ ಇಟ್ಟುಕೊಂಡು ಗಲಾಟೆ ಮಾಡುತ್ತಾರೆ. ಶೋಭಾ ಕರಂದ್ಲಾಜೆ ಅವರು ಎಲ್ಲಿದ್ದಾರೆ ಗೊತ್ತಿಲ್ಲ‌. ಆದರೆ  ಕೋಮು ಗಲಭೆ ಆದ ಸಂಧರ್ಭದಲ್ಲಿ ಬಾಯಿ ಬಡಿದುಕೊಳ್ಳುತ್ತಾರೆ. ರಾಮನ ಹೆಸರಿನಲ್ಲಿ ರಾಜಕೀಯ ಮಾಡಿದ್ರಿ. ರಾಮನೆ ನಿಮಗೆ ಕಲ್ಲು ಹಾಕಿದ. ಈಗ ಗಣೇಶನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು

ಬಿಜೆಪಿ ಈ ನಾಯಕರು ಕೋಮು ಗಲಭೆ ನಿರ್ಮಾಣದ ಕಾರಣಕರ್ತರು

ಬಿಜೆಪಿ ನಾಯಕರಾದ ವಿಜಯೇಂದ್ರ, ಅಶೋಕ್ , ಸಿ.ಟಿ.ರವಿ, ಅಶ್ವಥ್ ನಾರಾಯಣ್ ವಿರುದ್ಧ ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲು ಮಾಡಬೇಕು. ಕೋಮು ಗಲಭೆ ನಿರ್ಮಾಣದ  ಕಾರಣಕರ್ತರು ಇವರು ಎಂದು ಎಂ‌.ಲಕ್ಷ್ಮಣ್ ಹೇಳಿದರು.

Key words: BJP leaders, communal riots, Goonda Act, M. Laxman

Tags :

.