ಶ್ರೀರಾಮನ ಪೂಜೆಗೆ ಬಿಜೆಪಿಯವರ ಅಪ್ಪಣೆ ಬೇಕಾ..? ಸಚಿವ ರಾಮಲಿಂಗರೆಡ್ಡಿ ಕಿಡಿ.
04:16 PM Jan 11, 2024 IST
|
prashanth
ಬೆಂಗಳೂರು,ಜನವರಿ,11,2024(www.justkannada.in): ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗಲು ನಿರ್ಧರಿಸಿರುವ ಕಾಂಗ್ರೆಸ್ ನಡೆಯನ್ನ ಟೀಕಿಸಿರುವ ಬಿಜೆಪಿ ನಾಯಕರಿಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಶ್ರೀರಾಮನ ಪೂಜೆಗೆ ಬಿಜೆಪಿಯವರ ಅಪ್ಪಣೆ ಬೇಕಾ..? ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಹೇಳಿರುವೆ. ಶ್ರೀರಾಮಚಂದ್ರರ ಏನಾದರೂ ಬಿಜೆಪಿಗೆ ಸೇರಿದವರಾ. ಶ್ರೀರಾಮಚಂದ್ರ ಇಡೀ ದೇಶದ ಜನತೆಗೆ ಸೇರಿದಂತಹ ವ್ಯಕ್ತಿ ಎಂದು ಟಾಂಗ್ ನೀಡಿದರು.
ರಾಮನ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಹೀಗಾಗಿ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.
Key words: BJP- order- worship- Lord –Rama- Minister –Ramalinga reddy
Next Article