For the best experience, open
https://m.justkannada.in
on your mobile browser.

ಸಿಎಂ ವಿರುದ್ದ ರಾಜಕೀಯ ಷಡ್ಯಂತ್ರ: ಆ.3ರಂದು ಮೈಸೂರು ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆಗೆ ನಿರ್ಧಾರ

03:20 PM Jul 31, 2024 IST | prashanth
ಸಿಎಂ ವಿರುದ್ದ ರಾಜಕೀಯ ಷಡ್ಯಂತ್ರ  ಆ 3ರಂದು ಮೈಸೂರು ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆಗೆ ನಿರ್ಧಾರ

ಮೈಸೂರು,ಜುಲೈ,31,2024 (www.justkannada.in):  ಮುಡಾ ಹಗರಣ ಸಂಬಂಧ  ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿರುವ ಬಿಜೆಪಿ ವಿರುದ್ಧ ಸಿಡಿದೆದ್ದ ಅಹಿಂದ ವರ್ಗ ಆಗಸ್ಟ್ 3 ರಂದು ಮೈಸೂರು ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದೆ.

ಬಿಜೆಪಿ ಜೆಡಿಎಸ್ ದೋಸ್ತಿ ವಿರುದ್ಧ ಕಾಂಗ್ರೆಸ್ ನಿಂದಲೂ ಹೋರಾಟ ನಡೆಸಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ಮೈಸೂರು ಜಿಲ್ಲಾ ಅಹಿಂದ ಮುಖಂಡರುಗಳಿಂದ ರಾಜ್ಯ ಹಿಂದುಳಿದ ವರ್ಗದ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್ ಶಿವರಾಮು ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ  ಬಿಜೆಪಿ ಪಾದಯಾತ್ರೆ ವಿರುದ್ಧ ಆಗಸ್ಟ್ 3 ರಂದೇ ಪ್ರತಿಭಟನೆ, ಮೈಸೂರು ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಳ್ಳಲಾಗಿದೆ.

ಬಿಜೆಪಿ ಜೆಡಿಎಸ್ ದೋಸ್ತಿ ಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ರಾಜಕೀಯ ಷಡ್ಯಂತ್ರ ನಡೆಸುತ್ತಿವೆ. ಸಿದ್ದರಾಮಯ್ಯ ಅಹಿಂದ ಸಮುದಾಯದ ಸರ್ವೊಚ್ಚ ನಾಯಕ. ಮೂಡಾ ಹಗರಣದಿಂದ ಸಿದ್ದರಾಮಯ್ಯ ರಾಜಕೀಯ ಮುಗಿಸಲು ಷಡ್ಯಂತ್ರ ನೆಡೆಸುತ್ತಿದೆ. ಸಿದ್ದರಾಮಯ್ಯ ಅವರನ್ನು ಹತ್ತಿಕ್ಕುವ ಪ್ರಯತ್ನವನ್ನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್  ಪಾದಯಾತ್ರೆ ವಿರುದ್ದ ಹೋರಾಟದ ನಿರ್ಣಯ ಮಾಡಿದ್ದೇವೆ. ಪಾದಯಾತ್ರೆ ವಿರೋಧಿಸಿ  ಆಗಸ್ಟ್ 3 ರಂದು ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲು ತೀರ್ಮಾನ ಮಾಡಲಾಗಿದೆ. ಬಿಜೆಪಿ ಜೆಡಿಎಸ್ ಹಿಮ್ಮೆಟ್ಟಿಸುವ ಮೂಲಕ ಸಿದ್ದರಾಮಯ್ಯ ಕೈ ಬಲಪಡಿಸಲು ನಿರ್ಧಾರವನ್ನ ಮಾಡಲಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.

Key words: BJP, Padayatra, protest, Backward class, leader

Tags :

.