HomeBreaking NewsLatest NewsPoliticsSportsCrimeCinema

ಬಿಜೆಪಿ ನಾಲ್ಕು  ವರ್ಷ ಅಧಿಕಾರದಲ್ಲಿದ್ದರೂ ರಸ್ತೆ ಗುಂಡಿ ಮುಚ್ಚಲಾಗಲಿಲ್ಲ-ಸಿಎಂ ಸಿದ್ದರಾಮಯ್ಯ ಟೀಕೆ

02:57 PM Dec 06, 2023 IST | prashanth

ಬೆಳಗಾವಿ, ಡಿಸೆಂಬರ್,6,2023(www.justkannada.in):  ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದು ರಸ್ತೆ ಗುಂಡಿ ಮುಚ್ಚಲಾಗಲಿಲ್ಲ  ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ  ವಾಗ್ದಾಳಿ ನಡೆಸಿದರು.

ಇಂದು ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದರು. ಬ್ರಾಂಡ್ ಬೆಂಗಳೂರು ಕುರಿತಂತೆ ಬಿಜೆಪಿ ಸರಿಯಾಗಿ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿರುವ ಬಗ್ಗೆ ಮಾತನಾಡಿ  ನಾವು ಅಧಿಕಾರಕ್ಕೆ ಬಂದು 6 ತಿಂಗಳಾಯಿತು. ಬಿಜೆಪಿ ಬ್ರಾಂಡ್ ಬೆಂಗಳೂರು ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು ಉಚ್ಚ ನ್ಯಾಯಾಲಯ ಅವರಿಗೆ ಗುಂಡಿ ಮುಚ್ಚಿಲ್ಲ  ಎಂದು ಛೀಮಾರಿ ಹಾಕಿದೆ. ಅವರಿಗೆ ಬೆಂಗಳೂರಿನ ಬಗ್ಗೆ  ಮಾತನಾಡಲು ಯಾವ ನೈತಿಕ ಹಕ್ಕಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ಸದನ ನಡೆಯುತ್ತಿದ್ದು ಸಚಿವರು ತೆಲಂಗಾಣದಲ್ಲಿದ್ದಾರೆ ಎಂಬ ಹೇಳಿಕೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಎಲ್ಲರೂ ಅಲ್ಲಿಲ್ಲ, ಒಂದಿಬ್ಬರು ಹೋಗಿದ್ದಾರೆ ರಾಜಕೀಯವನ್ನೂ  ಮಾಡಬೇಕಲ್ಲ ಎಂದರು.  ಜಮೀರ್ ಅಹ್ಮದ್ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರು ಬರಬೇಕಷ್ಟೇ. ಬಹುತೇಕ  ಜನ  ವಾಪಸ್ಸು ಬಂದಿದ್ದಾರೆ ಎಂದರು.

ಅಭಿವೃದ್ಧಿ ಭಾಷಣವಿಲ್ಲ ಸಿದ್ದರಾಮಯ್ಯ ಕೇವಲ ಓಲೈಕೆ ಭಾಷಣ ಮಾಡುತ್ತಾರೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅದೆಲ್ಲಾ ನಿಮ್ಮಿಂದಲೇ ಆಗಿದೆ. ಎಲ್ಲಾ ಸಮುದಾಯಗಳು ಒಳಗೊಂಡಂತೆ ಮುಸ್ಲಿಮರನ್ನು ರಕ್ಷಣೆ ಮಾಡಲಾಗುವುದು ಎಂದರು.

 

ENGLISH SUMMARY...

BJP which was in power for four years and has not been able to close potholes: CM Siddaramaiah

Belgavi, December 06: Chief Minister Siddaramaiah said that the BJP which was in power for four years could not close the potholes

He was speaking to the media at Belagavi Airport today.

Reacting to BJP accusing that the works are not carried out under Brand Bengaluru, the CM said that It has only been 6 months since we came to power. Did the BJP create brand Bangalore? the CM questioned. The High Court had reprimanded the BJP government for not filling the potholes. What moral right do they have to talk about Bengaluru, he asked.
Replying to a statement that when sessions are being held in North Karnataka and the ministers are all staying in Telangana, the CM said that not all the ministers are there, one or two have gone and there is need to do politics also. Only Zameer Ahmed and D.K Shivakumar should come back. He said that most of the people have come back.
Responding to H.D Kumaraswamy's statement that Siddaramaiah has no development speech, it is only about appeasement speech, the CM said they he has said that all communities including Muslims will be protected.

Key words: BJP – power-four years- could not- close - potholes- CM Siddaramaiah

Tags :
BJP – power-four yearsCloseCM SiddaramaiahCould notpotholes
Next Article