For the best experience, open
https://m.justkannada.in
on your mobile browser.

ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪ್ರಚಾರದ ರ್ಯಾಲಿ ವೇಳೆ ಅಪಘಾತ: ವ್ಯಕ್ತಿ ಸಾವು.  

04:15 PM Apr 08, 2024 IST | prashanth
ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪ್ರಚಾರದ ರ್ಯಾಲಿ ವೇಳೆ ಅಪಘಾತ  ವ್ಯಕ್ತಿ ಸಾವು   

ಬೆಂಗಳೂರು, ಏಪ್ರಿಲ್, 8, 2024 (www.justkannanda.in):  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ  ಪ್ರಚಾರದ ರ್ಯಾಲಿ ವೇಳೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರಿನ ಕೆ.ಆರ್.ಪುರದ ಗಣೇಶ ದೇಗುಲದ ಬಳಿ ಈ ಘಟನೆ ನಡೆದಿದೆ. ಕೆ.ಆರ್.ಪುರದ ಟಿ.ಸಿ.ಪಾಳ್ಯದ ಪ್ರಕಾಶ್(55) ಮೃತಪಟ್ಟ ವ್ಯಕ್ತಿ.

ಆಗಿದ್ದೇನು..?

ಪ್ರಕಾಶ್ ಹೋಂಡಾ ಆಯಕ್ಟಿವ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ಮುಖಂಡರೊಬ್ಬರು ಕಾರು ರಸ್ತೆಯಲ್ಲಿ ಪಾರ್ಕ್ ಮಾಡಿ ಹಿಂದೆ ಮುಂದೆ ನೋಡದೇ ಏಕಾಏಕಿ ಬಾಗಿಲು ತೆರೆದಿದ್ದಾರೆ, ಕಾರಿನ ಬಾಗಿಲು ಬೈಕ್​ ಗೆ ತಾಗಿದ್ದು,  ಪರಿಣಾಮ ಪ್ರಕಾಶ್ ಕೆಳಗೆ ಬಿದ್ದಿದ್ದಾರೆ.  ಈ ವೇಳೆ ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್​ ಪ್ರಕಾಶ್​ ಅವರ ಮೇಲೆ ಹರಿದಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಪ್ರಕಾಶ್ ಸಾವನ್ನಪ್ಪಿದ್ದಾರೆ ಎನ್ನಲಾಗಿದ. ಇನ್ನು ಈ ಕುರಿತು  ಕೆಆರ್ ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಶೋಭಾ ಕರಾಂದ್ಲಾಜೆ, ನಮ್ಮ ಕಾರ್ಯಕರ್ತ ನಿಷ್ಟಾವಂತ ಕಾರ್ಯಕರ್ತ‌  ಪ್ರಕಾಶ್ ಗೆ ಆಕ್ಸಿಡೆಂಟ್ ಆಗಿದೆ. ನಾವು ರ್ಯಾಲಿಯಲ್ಲಿ ಮುಂದೆ ಹೋಗಿದ್ದವು. ರಸ್ತೆ ಬದಿ ನಿಂತಿದ್ದ ನಮ್ಮ ಕಾರು ಡೋರ್ ಓಪನ್ ಆದಾಗ ಬೈಕ್ ನಲ್ಲಿ ಬಂದು ಡಿಕ್ಕಿ ಹೊಡೆದಿದ್ದಾರೆ. ಬಳಿಕ ಕೆಳಗೆ ಬಿದ್ದಿದ್ದಾಗ ಬಸ್ ಹರಿದಿದೆ. ಪೋಸ್ಟ್ ಮಾರ್ಟಮ್ ನಲ್ಲಿ ಸಾವು ಹೇಗೆ ಆಗಿದೆ ಎನ್ನುವುದು ತಿಳಿಯಲಿದೆ. ಇದರಿಂದ ನಮಗೆಲ್ಲರಿಗೂ ದುಃಖ ಆಗಿದೆ, ಪ್ರಕಾಶ್ ಕುಟುಂಬಕ್ಕೆ ಪಕ್ಷದಿಂದ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

Key words: BJP, Shobha Karandlaje,  Accident

Tags :

.