For the best experience, open
https://m.justkannada.in
on your mobile browser.

ಬಿಜೆಪಿ ಪಾಪದ ಯಾತ್ರೆ ಅಂತ್ಯ: ದೋಸ್ತಿ ಪಕ್ಷದ ನಾಯಕರ ಆರೋಪಕ್ಕೆ ಎಂ.ಲಕ್ಷ್ಮಣ್ ಕೌಂಟರ್

05:51 PM Aug 10, 2024 IST | prashanth
ಬಿಜೆಪಿ ಪಾಪದ ಯಾತ್ರೆ ಅಂತ್ಯ  ದೋಸ್ತಿ ಪಕ್ಷದ ನಾಯಕರ ಆರೋಪಕ್ಕೆ ಎಂ ಲಕ್ಷ್ಮಣ್ ಕೌಂಟರ್

ಮೈಸೂರು,ಆಗಸ್ಟ್,10,2024 (www.justkannada.in):  ಮುಡಾ ಹಗರಣ ವಿರೋಧಿಸಿ ಬಿಜೆಪಿ, ಜೆಡಿಎಸ್ ನಡೆಸಿದ ಮೈಸೂರು ಚಲೋ ಪಾದಯಾತ್ರೆ ಇಂದು ಮೈಸೂರಿನಲ್ಲಿ ಅಂತ್ಯಗೊಂಡಿದ್ದು ಈ ಕುರಿತು ಮಾತನಾಡಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಲೇವಡಿ ಮಾಡಿದ್ದಾರೆ.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬಿಜೆಪಿಯವರ ಪಾಪದ ಯಾತ್ರೆ ಇಂದು ಅಂತ್ಯಗೊಂಡಿದೆ. ಬಿಜೆಪಿಯವರ ಮೈ ಮೇಲೆ ಅಂಟಿದ್ದ ಕೊಳೆಯನ್ನ ಇಂದು ತೊಳೆದುಕೊಂಡಿದ್ದಾರೆ. ಬಿಎಸ್  ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಈಗ ಬಿಎಸ್ ವೈ ವಿರುದ್ದ ಪೊಕ್ಸೋ ಪ್ರಕರಣ ದಾಖಲಾಗಿದೆ. ಹೈಕಮಾಂಡ್ ಕೃಪಾಕಟಾಕ್ಷದೊಂದಿಗೆ ಇಂದು ಬಿಎಸ್ ವೈ ಬೇಲ್ ಮೇಲೆ ಹೊರಗಿದ್ದಾರೆ. ವಿಜಯೇಂದ್ರ ತಮ್ಮ ತಂದೆ ಜೈಲಿಗೆ ಹೋಗಲಿಕ್ಕೆ ಕಾರಣ ಯಾರು ಎಂಬುದನ್ನ ಹೇಳಬೇಕು. ಯಡಿಯೂರಪ್ಪ ಸಹಿಯನ್ನ ನಕಲು ಮಾಡಿದ್ದು ಯಾರು. ವಿಜಯೇಂದ್ರ ಇದಕ್ಕೆಲ್ಲ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಅಶೋಕ್ ರವರು ಸಿಎಂ ಜಮೀನಿನ ಬೆಲೆ ಬಗ್ಗೆ ಮಾತನಾಡಿದ್ದಾರೆ. ಅಶೋಕ್ ರವರೇ ಬ್ರೇನ್ ಗೂ ನಾಲಿಗೆಗೂ ಸಂಬಂಧವಿಲ್ಲದೆ  ಮಾತನಾಡುತ್ತೀರಾ. ಅಂದು ಖರೀದಿ ಮಾಡಿದ ಆಸ್ತಿ ಬೆಲೆ  ಇಂದು ಹೆಚ್ಚಾಗಿದೆ. ಬೆಲೆ ಹೆಚ್ಚಾಗಬಾರದು ಅಂತ ಇದೆಯಾ. ಹಾಗಾದರೇ ನಿಮ್ಮ ಅಫಿಡವಿಟ್ ನಲ್ಲಿ ಘೋಷಣೆ ಮಾಡಿಕೊಂಡಿರುವ ಆಸ್ತಿ ಎಷ್ಟು. ನಿಮ್ಮ ಬಳಿ ಇರುವ ಆಸ್ತಿ ಎಷ್ಟು ತಿಳಿಸಿ. ವಿಪಕ್ಷ ನಾಯಕ ಸ್ಥಾನ ಉಳಿಸಿಕೊಳ್ಳಲಿಕ್ಕೆ ಸಿಎಂ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತೀರಾ. ವಿಪಕ್ಷ ನಾಯಕನ ಸ್ಥಾನಕ್ಕೆ ತಕ್ಕಂತೆ ಯಾವತ್ತಾದರೂ ನಡೆದುಕೊಂಡಿದ್ದೀರಾ ಎಂದು ಕಿಡಿಕಾರಿದರು.

ಇದೇ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಗೂ ತಿರುಗೇಟು ಕೊಟ್ಟ ಎಂ.ಲಕ್ಷ್ಮಣ್, ರಾಧಾ ಮೋಹನ್ ದಾಸ್ ಬಿಜೆಪಿ ನಾಯಕರು ಹೇಳಿಕೊಟ್ಟಿದ್ದನ್ನ ಹೇಳಿದ್ದಾರೆ. ನಿಮಗೆ ರಾಜ್ಯದ ಬಗ್ಗೆ ಏನಾದರು ಮಾಹಿತಿ ಇದಿಯಾ? ನಾಲ್ಕು ವರ್ಷದ ಅವಧಿಯಲ್ಲಿ 2 ಲಕ್ಷ ಕೋಟಿ ಹಗರಣ ಮಾಡಿರೋದರ ಬಗ್ಗೆ ನಿಮ್ಮ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದಾರೆ. ಜಯ್ ಶಾ ಅವರ ಆಸ್ತಿ 6300 ಕೋಟಿ ಆಗಿದ್ದು ಹೇಗೆ ಎಂಬುದನ್ನ ತಿಳಿಸಿ. ಭ್ರಷ್ಟಾಚಾರದ ಪಿತಾಮಹ ಬಿಜೆಪಿಯವರೇ. ಪ್ರಹ್ಲಾದ್ ಜೋಶಿ ಸುಳ್ಳು ಹೇಳೋದರಲ್ಲಿ ನಿಸ್ಸಿಮ. ಸಿದ್ದರಾಮಯ್ಯರ ಬಗ್ಗೆ ಮಾತನಾಡೋ ನೈತಿಕತೆ ನಿಮಗೆ ಇದಿಯಾ. ಕೆಲ ದಲಿತ ಮುಖಂಡರ ಬಗ್ಗೆ ಸಮಾವೇಶದಲ್ಲಿ ಮಾತನಾಡಿಸಿದ್ದೀರಾ. ಎಸ್ ಸಿಪಿ,  ಟಿಎಸ್ಪಿ ಕಾಯ್ದೆ ಬಗ್ಗೆ ಇವರಿಗೇನಾದರೂ ತಿಳಿದಿದೀಯಾ? ಎಸ್ಸಿಪಿ ಟಿಎಸ್ಪಿ ಯೋಜನೆ ಜಾರಿ ಮಾಡಿದ್ದೆ ನಾವು ಎಂದು  ಕುಟುಕಿದರು.

ನಾವು ಮಾಡಿಸಿದ್ದ ಪುಸ್ತಕವನ್ನೇ ಕಾಪಿ ಮಾಡಿದ್ದೀರಾ?

ಮುಡಾದಲ್ಲಿ ಸಿಎಂ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂದು ಪುಸ್ತಕ ಬಿಡುಗಡೆ ಮಾಡಲಾಗಿದೆ. ನಾವು ಮಾಡಿಸಿದ್ದ ಪುಸ್ತಕವನ್ನೇ ಕಾಪಿ ಮಾಡಿದ್ದೀರಾ. ಈ ಪುಸ್ತಕದಲ್ಲಿ 5ಸಾವಿರ ಸೈಟ್ ಎಲ್ಲಿದ್ದಾವೆ ತಿಳಿಸಿ. ನಮ್ಮ ಸರ್ಕಾರ ಬಂದಾಗ ತನಿಖೆ ಮಾಡಲಿಕ್ಕೆ ಮುಂದಾಗಿದ್ದೇವೆ. ಮುಡಾದಲ್ಲಿ ಹೆಚ್ಚು ಅಕ್ರಮ ನಿವೇಶನ ಪಡೆದಿರೋದು ಬಿಜೆಪಿ, ಜೆಡಿಎಸ್ ನವರೇ. ದಾಖಲೆಗಳಿಲ್ಲದೆ ನಿವೇಶನ ಹಂಚಿಕೆ ಮಾಡೋದು ಹಗರಣ. ಈಗಿರುವಾಗ ಇಲ್ಲಿ ಸಿಎಂ ಅವರ ಹಗರಣ ಮಾಡಿರೋದು ಎಲ್ಲಿದೆ. ಸುಳ್ಳು ಹೇಳಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದೀರಾ ಎಂದು ಎಂ.ಲಕ್ಷ್ಮಣ್ ಗುಡುಗಿದರು.

ದೇವೇಗೌಡರ ಫ್ಲೆಕ್ಸ್ ಹಾಕಿರುವ ವಿಚಾರಕ್ಕೂ ನಮಗೂ ಸಂಬಂಧವಿಲ್ಲ

ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ದೇವೇಗೌಡರ ಕುಟುಂಬದ ಅಕ್ರಮ ಆಸ್ತಿ ಫ್ಲೆಕ್ಸ್ ಅಳವಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್,  ಈ ಫ್ಲೆಕ್ಸ್ ಅನ್ನು ನಾವು ಹಾಕಿಲ್ಲ. ಯಾರು ಆ ಫ್ಲೆಕ್ಸ್ ಹಾಕಿದ್ದಾರೆ ಎಂಬ ಮಾಹಿತಿ ಇಲ್ಲ. ನಾವು ನಮ್ಮ ಸಮಾವೇಶ ಕಡೆ ಗಮನಕೊಟ್ಟಿದ್ದೆವು. ನಮ್ಮ ವಿರುದ್ಧ ಅಪಪ್ರಚಾರ ಮಾಡಲಿಕ್ಕೆ ಈ ಕೆಲಸ ಮಾಡಿದ್ದಾರೆ. ಒಂದು ಕಡೆ ಇವರೇ ಬ್ಯಾನರ್ ಹಾಕ್ತಾರೆ. ಮತ್ತೊಂದು ಕಡೆ ಇವರೇ ಪ್ರೊಟೆಸ್ಟ್ ಮಾಡ್ತಾರೆ. ಫ್ಲೆಕ್ಸ್ ಹಾಕಿರುವ ವಿಚಾರಕ್ಕೂ ನಮಗೂ ಸಂಬಂಧವಿಲ್ಲ ಎಂದು ಎಂ.ಲಕ್ಷ್ಮಣ್ ಹೇಳಿದರು.

Key words: BJP, sin journey , over, mysore, kpcc, M. Laxman

Tags :

.