For the best experience, open
https://m.justkannada.in
on your mobile browser.

ಭಿನ್ನಮತ ಶಮನಕ್ಕೆ ಕಸರತ್ತು: ರಮೇಶ್ ಜಾರಕಿಹೊಳಿ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ.

11:40 AM Nov 23, 2023 IST | prashanth
ಭಿನ್ನಮತ ಶಮನಕ್ಕೆ ಕಸರತ್ತು  ರಮೇಶ್ ಜಾರಕಿಹೊಳಿ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಬೆಂಗಳೂರು,ನವೆಂಬರ್,23,2023(www.justkannada.in): ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಶಮನ ಮಾಡಲು  ಬಿವೈ ವಿಜಯೇಂದ್ರ ಕಸರತ್ತು ನಡೆಸುತ್ತಿದ್ದು ಈ ನಡುವೆ ಇಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿಯನ್ನ ಭೇಟಿಯಾಗಿದ್ದಾರೆ.

ಬೆಂಗಳೂರಿನ ನಿವಾಸದಲ್ಲಿ ರಮೇಶ್ ಜಾರಕಿಹೊಳಿಯನ್ನ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತುಕತೆ ನಡೆಸಿದರು. ಬಳಿಕ ಇಬ್ಬರು ನಾಯಕರು ಜೊತೆಗೆ ಕುಳಿತು ಉಪಹಾರ ಸೇವಿಸಿದರು.

ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ,   ಅಸಮಾಧಾನಿತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವೆ ಸೋಮಣ್ಣ,  ಲಿಂಬಾವಳಿ,  ಬೆಲ್ಲದ್,  ಯತ್ನಾಳ್ ಎಲ್ಲರನ್ನೂ ಜತೆಗೆ ಕರೆದೊಯ್ಯುವೆ. ಹಿರಿಯರ ಮಾತು ಸಲಹೆಗಳನ್ನ ಸ್ವೀಕರಿಸುವೆ ಎಂದು ತಿಳಿಸಿದರು.

Key words: BJP -State President- BY Vijayendra -met -Ramesh Jarakiholi

Tags :

.