ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರ: ಬಿವೈ ವಿಜಯೇಂದ್ರ ಪರ ಬ್ಯಾಟ್ ಬೀಸಿದ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ.
ಬೆಂಗಳೂರು,ಅಕ್ಟೋಬರ್,28,2023(www.justkannada.in): ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಿವೈ ವಿಜಯೇಂದ್ರ ಪರ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಬ್ಯಾಟ್ ಬೀಸಿದ್ದಾರೆ.
ವಿಜಯೇಂದ್ರ ಒಬ್ಬ ಯೂತ್ ಐಕಾನ್. ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೇ ತಪ್ಪೇನು..? ವಿಜಯೇಂದ್ರ ತಮ್ಮದೇ ಸ್ವಂತ ಬಲದಿಂದ ಬೆಳೆಯುತ್ತಿದ್ದಾರೆ ಎಂದು ಎಂ.ಪಿ ರೇಣುಕಾಚಾರ್ಯ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ, ನಾನು ಎಲ್ಲ ಕಡೆ ಪ್ರವಾಸ ಮಾಡಿದಾಗ ಕಾರ್ಯಕರ್ತರು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಬೇಕೆಂದು ಕೇಳುತ್ತಿದ್ದಾರೆ. ನಾನು ಅದನ್ನೇ ಕೇಳುತ್ತೀನಿ ಎಂದರು.
ಬಿಎಸ್ ಯಡಿಯೂರಪ್ಪ ಯಾವತ್ತಿಗೂ ಅವಕಾಶವಾದಿ ರಾಜಕಾರಣಿ ಅಲ್ಲ. ಯಡಿಯೂರಪ್ಪ ಅಂತಾ ದೊಡ್ಡ ನಾಯಕರು ಬಿಜೆಪಿಯಲ್ಲಿ ಯಾರೂ ಇಲ್ಲ. ಪಕ್ಷವನ್ನು ಪ್ರೀತಿಸಿದವರು, ಯಡಿಯೂರಪ್ಪ ಒಬ್ಬರು ಮಾಸ್ ಲೀಡರ್ ಆಗಿದ್ದು, ಅವರ ಮುಖ ನೋಡಿದ್ರೆ ನನಗೆ ಸಮಾಧಾನ ಆಗುತ್ತೆ ಎಂದು ಎಂ.ಪಿ ರೇಣುಕಾಚಾರ್ಯ ತಿಳಿಸಿದರು.
Key words: BJP- state- president -post -MP Renukacharya- bat - BY Vijayendra.