ಬಿಜೆಪಿ ಮೊದಲು ನಾಟಕ ಮಾಡುವುದನ್ನ ನಿಲ್ಲಿಸಲಿ- ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ.
12:07 PM Jan 16, 2024 IST
|
prashanth
ಚಿತ್ರದುರ್ಗ,ಜನವರಿ,16,2024(www.justkannada.in): ರಾಮಮಂದಿರ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೊದಲು ನಾಟಕ ಮಾಡುವುದನ್ನ ನಿಲ್ಲಿಸಲಿ ಎಂದು ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಬಿಜೆಪಿಯವರು ಮೊದಲು ನಾಟಕ ಮಾಡುವುದನ್ನ ನಿಲ್ಲಿಸಲಿ. ಮಂತ್ರಾಕ್ಷತೆಯನ್ನ ಹಿಡಿದು ಮನೆ ಮನೆಗೆ ಹೊರಟಿದ್ದಾರೆ. ಹಸಿದವರಿಗೆ ಅನ್ನ ಸೂರಿಲ್ಲದವರಿಗೆ ಸೂರು ಕೊಡಲಿ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ದೇಗುಲ ಶುಚಿ ಕೆಲಸಕ್ಕಿಂತ ಯುವಕರಿಗೆ ಉದ್ಯೋಗ ನೀಡಲಿ. ನಿರುದ್ಯೋಗ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿ. ಅನ್ನಭಾಗ್ಯಕ್ಕೆ ಅಕ್ಕಿಕೊಡದೇ ಮಂತ್ರಾಕ್ಷತೆಗೆ ಕೊಡುತ್ತಿದ್ದಾರೆ ಎಂದು ಹರಿಹಾಯ್ದರು.
Key words: BJP –stop- making –drama- first – Minister- Shivaraj Tangadagi
Next Article