ಬಿಜೆಪಿಯವರು ಅಪರೇಷನ್ ಕಮಲ ನಿಲ್ಲಿಸಿದ್ರೆ ಚುನಾವಣಾ ವೆಚ್ಚ ಕಡಿಮೆಯಾಗುತ್ತೆ- ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು,ಸೆಪ್ಟಂಬರ್,18,2024 (www.justkannada.in): ಒಂದು ದೇಶ ಒಂದು ಚುನಾವಣೆ ಕುರಿತು ವರದಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕ ಬೆನ್ನಲ್ಲೆ ಟೀಕೆಗಳು ವ್ಯಕ್ತವಾಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಅಪರೇಷನ್ ಕಮಲ ಮಾಡುವುದನ್ನು ನಿಲ್ಲಿಸಿದರೆ ಸ್ವಾಭಾವಿಕವಾಗಿ ಚುನಾವಣಾ ವೆಚ್ಚ ಕಡಿಮೆಯಾಗುತ್ತೆ ಎಂದು ಟಾಂಗ್ ಕೊಟ್ಟಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ದೇಶದಲ್ಲಿ ಹಲವು ರೀತಿಯಲ್ಲಿ ಚುನಾವಣೆ ನಡೆಯುತ್ತಿದೆ ಇದನ್ನು ಹೇಗೆ ಮಾಡಬೇಕೆಂದು ರಾಜ್ಯಗಳ ಜೊತೆ ಚರ್ಚಿಸಬೇಕಿತ್ತು ಪಂಚಾಯಿಯಿಂದ ಪಾರ್ಲಿಮೆಂಟ್ ವರೆಗೆ ಚುನಾವಣೆ ನಡೆಸುತ್ತೀರಾ? ಲೋಕಸಭೆ ಅಸೆಂಬ್ಲಿಗೆ ಚುನಾವಣೆ ನಡೆಸುತ್ತೀರಾ ಎಂಬ ಎಲ್ಲವನ್ನೂ ಚರ್ಚೆ ಮಾಡಬೇಕು ಎಂದರು.
ಒಂದು ಕಡೆ ಒಂದು ದೇಶ ಒಂದು ಚುನಾವಣೆ ಅಂತಾರೆ ಮತ್ತೋಮದೆಡೆ ಬಹುಮತ ಬರದಿದ್ದರೆ ಅಪರೇಷನ್ ಕಮಲ ಅಂತಾರೆ. ಪ್ರಧಾನಿ ಮೋದಿ ಅವರಿಗೆ ಕನಸು ಬೀಳುತ್ತೆ. ಮೋದಿ ಆ ಕನಸು ನನಸು ಮಾಡಲು ಬೆಳಿಗ್ಗೆ ಸಂಪುಟ ಸಭೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ಅಪರೇಷನ್ ಕಮಲ ಮಾಡುವುದನ್ನ ನಿಲ್ಲಿಸಿದರೆ ಸ್ವಾಭಾವಿಕವಾಗಿ ಚುನಾವಣಾ ವೆಚ್ಚ ಕಡಿಮೆಯಾಗುತ್ತೆ. ಬಿಜೆಪಿ ಮೊದಲು ಅತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
Key words: BJP, stops, Operation Kamala, election, Minister, Priyank Kharge