For the best experience, open
https://m.justkannada.in
on your mobile browser.

ಮೋದಿ ಪ್ರಭಾವದಿಂದ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿದೆ- ಕೆ.ಎಸ್ ಈಶ್ವರಪ್ಪ

11:09 AM Jun 06, 2024 IST | prashanth
ಮೋದಿ ಪ್ರಭಾವದಿಂದ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿದೆ  ಕೆ ಎಸ್ ಈಶ್ವರಪ್ಪ

ಶಿವಮೊಗ್ಗ,ಜೂನ್,6,2024 (www.justkannada.in): ಪ್ರಧಾನಿ ಮೋದಿ ಪ್ರಭಾವದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ನನಗೆ ಆರಂಭದಲ್ಲಿ ನಿರೀಕ್ಷಗೂ ಮೀರಿದ ಜನರ ಬೆಂಬಲ ಸಿಕ್ಕಿತ್ತು.  ಆದರೆ ಜನರು ಮಾತ್ರ ಮೋದಿ ಮರೆಯಲಿಲ್ಲ. ಬಿಜೆಪಿಯಲ್ಲಿ ಸಾಕಷ್ಟು ನ್ಯೂನ್ಯತೆ ಇದೆ. ಪಕ್ಷ ಶುದ್ಧೀಕರಣವಾಗಬೇಕು. ಒಂದೇ ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು ಅಪ್ಪಮಕ್ಕಳ ಕೈಯಲ್ಲಿ ಪಕ್ಷದ ಇದೆ ಅದನ್ನ ಮುಕ್ತ ಮಾಡಬೇಕಿದೆ ಎಂದರು.

ಬಿಎಸ್ ವೈ ರಿಂದ ಲಿಂಗಾಯತ ಸಮಾಜ ಬಿಜೆಪಿ ಪರ ಇದೆ. ಹಾಗಾದರೇ ಬೇರೆ ಜಾತಿಯವರು ಬಿಜೆಪಿಗೆ ಬೇಡವಾ..?  ಹಿಂದುಳಿದ ವರ್ಗದವರಿಗೆ ಬಿಜೆಪಿಯು ಲೋಕಸಭೆ ಚುನಾವಣೆ ಟಿಕೆಟ್ ನೀಡಲಿಲ್ಲ. ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ 25 ಸೀಟು ಗೆದ್ದಿತ್ತು.  ಈ ಚುನಾವಣೆಯಲ್ಲಿ 17 ಸ್ಥಾನ ಗೆಲ್ಲುವ ಮೂಲಕ ದುಸ್ಥಿತಿಗೆ ಬಂದಿದೆ. ಇದಕ್ಕೆ ಯಾರು ಕಾರಣ ಎಂಬುದು ಚರ್ಚೆಯಾಗಲಿ  ಹಿಂದುಳಿದ ದಲಿತರನ್ನ ಕಡೆಗಣಿಸಿದ್ದಕ್ಕೆ ಈ ದುಸ್ಥಿತಿಗೆ ಬಂದಿದೆ. ಕೇಂದ್ರ ರಾಜ್ಯ ನಾಯಕರು ಇದನ್ನ ಗಮನಿಸುತ್ತಾರೆಂಬ ವಿಶ್ವಾಸವಿದೆ ಎಂದು ಕೆ ಎಸ್ ಈಶ್ವರಪ್ಪ ತಿಳಿಸಿದರು.

Key words: BJP, won, Shimoga, Modi, KS Eshwarappa

Tags :

.