ಸಿಸಿಬಿಯಿಂದ ಬಿ.ಕೆ ಹರಿಪ್ರಸಾದ್ ವಿಚಾರಣೆ: ಸರ್ಕಾರದ ನಡೆಗೆ ಆಕ್ರೋಶ.
ಬೆಂಗಳೂರು,ಜನವರಿ,19,2024(www.justkannada.in): ಗೋಧ್ರಾ ಮಾದರಿಯಲ್ಲಿ ಮತ್ತೊಂದು ಘಟನೆ ನಡೆಯಬಹುದು ಅಯೋಧ್ಯೆಗೆ ತೆರಳುವವರಿಗೆ ರಕ್ಷಣೆ ನೀಡಿ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಅವರನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ತಮ್ಮ ವಿರುದ್ದವೇ ವಿಚಾರಣೆ ನಡೆಸಿದ ಹಿನ್ನೆಲೆ ಸರ್ಕಾರದ ವಿರುದ್ದ ಎಂಎಲ್ ಸಿ ಬಿಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಕೆ ಗೆಸ್ಟ್ ಹೌಸ್ ನಲ್ಲಿ ಸಿಸಿಬಿ ಪೊಲೀಸರು ಬಿಕೆ ಹರಿಪ್ರಸಾದ್ ಅವರನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ವಿವಿಐಪಿ ಟ್ರೀಟ್ ಮೆಂಟ್ ಬೇಡ. ಬೇಕಾದರೇ ಅರೆಸ್ಟ್ ಮಾಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿ . ಬಹಿರಂಗವಾಗಿ ಮಂಪರು ಪರೀಕ್ಷೆ ಮಾಡಿ ನಮ್ಮದೇ ಸರ್ಕಾರದಲ್ಲಿ ನನ್ನ ವಿಚಾರಣೆ ನಡೆದಿದೆ ನನ್ನ ಜೀವನದಲ್ಲಿ ಯಾವುದೇ ಕೇಸ್ ಇಲ್ಲ. ಕಾಂಗ್ರೆಸ್ ಸರ್ಕಾರದ ವಿಚಾರಣೆ ನಡೆಸಿರೋದು ಆಶ್ಚರ್ಯ. ಇದು ಕಾಂಗ್ರೆಸ್ ಸರ್ಕಾರನಾ..? ಅಥವಾ ಆರ್ ಎಸ್ ಎಸ್ ಸರ್ಕಾರನಾ..? ಎಂದು ಬಿ.ಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿಚಾರಣೆ ಬಳಿಕ ಮಾತನಾಡಿದ ಬಿಕೆ ಹರಿಪ್ರಸಾದ್, ಗೋಧ್ರಾ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಗೋಧ್ರಾ ರೀತಿಯಲ್ಲಿ ಮತ್ತೊಂದು ಘಟನೆ ನಡೆಯುತ್ತೆ . ಆನಂತ್ ಕುಮಾರ್ ಹೆಗಡೆ ವಿರುದ್ದ ಕ್ರಮ ಕೈಗೊಂಡಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದವೂ ಕ್ರಮ ಕೈಗೊಂಡಿಲ್ಲ. ಆದರೆ ನನ್ನ ವಿರುದ್ದ ವಿಚಾರಣೆಗೆ ಪೊಲೀಸರನ್ನ ಕಳಿಸಿದ್ದಾರೆ. ಮೂರು ಭಾಗವಾಗಿದ್ದಾಗ ಕಾಂಗ್ರೆಸ್ ಬಿಟ್ಟಿಲ್ಲ. ಬೆದರಿಕೆಗೆ ನಾನು ಬಗ್ಗಲ್ಲ ಎಂದು ಕಿಡಿಕಾರಿದ್ದಾರೆ.
Key words: BK Hariprasad- inquiry – CCB-Outrage - government's- move.