For the best experience, open
https://m.justkannada.in
on your mobile browser.

ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ: ಅಂಧ ದಂಪತಿ ಸಾವು.

11:10 AM Feb 23, 2024 IST | prashanth
ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ  ಅಂಧ ದಂಪತಿ ಸಾವು

ಬೆಂಗಳೂರು,ಫೆಬ್ರವರಿ,23,2024(www.justkannada.in): ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿಯಾಗಿ ಅಂಧ ದಂಪತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನೆಲಮಂಗಲದ ಯಂಟಗಾನಹಳ್ಳಿ ಬಳಿ  ಈ ಘಟನೆ ನಡೆದಿದೆ. ಶ್ರೀಧರ್(52), ಅರ್ಚನಾ(36) ಮೃತಪಟ್ಟ ಅಂಧ ದಂಪತಿ. ಇನ್ನು ಘಟನೆಯಲ್ಲಿ ಬೈಕ್ ಸವಾರನಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಂಧ ದಂಪತಿ ರಸ್ತೆ ದಾಟುತ್ತಿದ್ದಾಗ  ಈ ಘಟನೆ ಸಂಭವಿಸಿದ್ದು, ಈ ಕುರಿತು ನೆಲಮಂಗಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: blind couple- died – bike- collision

Tags :

.