HomeBreaking NewsLatest NewsPoliticsSportsCrimeCinema

ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಕಟ್ಟೆಚ್ಚರ ವಹಿಸಲು ಪೊಲೀಸರಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಸೂಚನೆ.

11:58 AM Dec 01, 2023 IST | prashanth

ತುಮಕೂರು,ಡಿಸೆಂಬರ್,1,2023(www.justkannada.in): ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ  ಕಟ್ಟೆಚ್ಚರ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಗೃಹಸಚಿವ ಡಾಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ ನಿಮ್ಮ ಮಕ್ಕಳನ್ನ ಕೊಲ್ಲುತ್ತೇವೆ ಎಂದು ಇಮೇಲ್ ಬೆದರಿಕೆ ಕರೆಯಲ್ಲಿ  ಹೇಳಿದ್ದಾರೆ ಮತಾಂತರವಾಗಿ ಎಂದು ಸಂದೇಶ ಕೊಟ್ಟಿದ್ದಾರೆ. ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಇಂದು ಮಧ್ಯಾಹ್ನ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದರು.

ಬೆದರಿಕೆ ಬಂದಿರುವ ಎಲ್ಲಾ 15 ಶಾಲೆಗಳಲ್ಲೂ ತಪಾಸಣೆ ನಡೆಸಲು ಸೂಚನೆ ನೀಡಿದ್ದೇನೆ. ಸಿಐಡಿ ಸ್ಕ್ವಾಡ್ ಕಳುಹಿಸಿ ತಪಾಸಣೆ ನಡೆಸುವಂತೆ ಸೂಚಿಸಿದ್ದೇನೆ. ಇಂತಹ ಘಟನೆ ಮರುಕಳಿದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಬೆದರಿಕೆ ಮೂಲ ಪತ್ತೆ ಹಚ್ಚುವವರೆಗೂ ಬಿಡಲ್ಲ  ಎಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Key words: Bomb threat calls - schools:-Home Minister -Parameshwar -instructs - police

Tags :
Bomb threat calls - schools:-Home Minister -Parameshwar -instructs - police
Next Article