For the best experience, open
https://m.justkannada.in
on your mobile browser.

ಬ್ರೆಸ್ಟ್‌ ಕ್ಯಾನ್ಸರ್‌ ಸಂಶೋಧನೆ@ ಜಪಾನ್‌ :  ಭಾರತ ಪ್ರತಿನಿಧಿಸಿದ ಆದಿಚುಂಚನಗಿರಿ ವಿವಿಯ ಡಾ. ಶೋಬಿತ್‌.

03:53 PM Sep 12, 2024 IST | mahesh
ಬ್ರೆಸ್ಟ್‌ ಕ್ಯಾನ್ಸರ್‌ ಸಂಶೋಧನೆ  ಜಪಾನ್‌    ಭಾರತ ಪ್ರತಿನಿಧಿಸಿದ ಆದಿಚುಂಚನಗಿರಿ ವಿವಿಯ ಡಾ  ಶೋಬಿತ್‌

ಮೈಸೂರು, ಸೆ,12,2024: (www.justkannada.in news) ಭಾರತ, ಜಪಾನ್‌ ಹಾಗೂ ಆಫ್ರಿಕಾ ಸಹಭಾಗಿತ್ವದಲ್ಲಿ ಜಂಟಿಯಾಗಿ ಬ್ರೆಸ್ಟ್‌ ಕ್ಯಾನ್ಸರ್‌ ಬಗೆಗಿನ ಸಂಶೋಧನೆಗೆ ಮುಂದಾಗಿವೆ. ಕರ್ನಾಟಕದ ಯುವ ವಿಜ್ಞಾನಿ ಡಾ.ಶೋಬಿತ್‌ ರಂಗಪ್ಪ ಭಾರತವನ್ನು ಪ್ರತಿನಿಧಿಸುತ್ತಿದ್ದು, ಯೋಜನೆ ಅಂಗವಾಗಿ ಜಪಾನ್‌ ನಲ್ಲಿ ಆಯೋಜಿಸಿರುವ ತರಬೇತಿಯಲ್ಲಿ ಭಾಗಿಯಾಗಿದ್ದಾರೆ.

ಜಾಪ್ನೀಸ್ ಸೋಸೈಟಿ ಫಾರ್‌ ಪ್ರೋಮೋಷನ್‌ ಆಫ್‌ ಸೈನ್ಸ್‌  (JSPS) ಪ್ರತಿಷ್ಠಾನವು ಈ ಸಂಶೋದನೆ ಪ್ರಾಯೋಜಕತ್ವ ವಹಿಸಿದ್ದು, ಮೂರು ವರ್ಷಗಳ ಅವಧಿಗೆ ಯೋಜನೆ ಜಾಲ್ತಿಯಲ್ಲಿರಲಿದೆ. ಇಂಡಿಯಾ-ಜಪಾನ್-ಆಫ್ರಿಕಾದ ಕ್ಯಾನ್ಸರ್‌ ಪೀಡಿತರ ಬಗೆಗೆ ಸಂಶೋದನೆ ನಡೆಸುವುದು ಮುಖ್ಯ ಗುರಿ. ಸ್ತನ ಕ್ಯಾನ್ಸರ್‌ ಗೆ ಸಂಬಂಧಿಸಿದಂತೆ ಈ ಮೂರು ವಿವಿಧ ದೇಶಗಳಲ್ಲಿನ ರೋಗಿಗಳನ್ನು ಅಧ್ಯಯನ ನಡೆಸುವುದು ಉದ್ದೇಶ. ಏಷಿಯಾ, ಇಂಡಿಯಾ ಹಾಗೂ ಆಫ್ರಿಕ ಖಂಡಗಳಲ್ಲಿನ ಕ್ಯಾನ್ಸರ್‌  ಪೀಡಿತ ಮಹಿಳೆಯರಲ್ಲಿ ಕಾರ್ಬೋಹೈಡ್ರೇಟ್‌ ವ್ಯತ್ಯಸದ ಬಗ್ಗೆ ಸುದೀರ್ಘ ಅಧ್ಯಯನ ನಡೆಸುವ ಮೂಲಕ ಕ್ಯಾನ್ಸರ್‌ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಯತ್ನಿಸಲಾಗುತ್ತದೆ.

ಈ ಯೋಜನೆಯ ಅವಧಿಯು 3 ವರ್ಷ. ಇದೀಗ, ಡಾ. ಶೋಬಿತ್ ನೇತೃತ್ವದ ತಜ್ಞರ ತಂಡ ಜಪಾನ್‌ ನ ಹೋಕಾಯ್ಡೋ ವಿಶ್ವವಿದ್ಯಾಲಯದಲ್ಲಿ ತರಬೇತಿ ಯೋಜನೆಯಲ್ಲಿ ಭಾಗಿಯಾಗಿದ್ದು, ಮುಂದಿನ  ವರ್ಷ ಹೋಕಾಯ್ಡೋ ವಿಶ್ವವಿದ್ಯಾಲಯ ಹಾಗೂ ಎಥಿಯೋಪಿಯಾದ ಏಡಿಸ್ ಜೊಜ್ಜಾ ವಿಶ್ವವಿದ್ಯಾಲಯದ ತಜ್ಞರ ತಂಡವನ್ನು ಕರ್ನಾಟಕದ ಆದಿಚುಂಚಂಗಿರಿ ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಲಾಗತ್ತದೆ.

ಡಾ. ಶೋಬಿತ್ 2016 ರಿಂದ ಜಪಾನ್ ಮತ್ತು ಭಾರತದ  ನಡುವೆ ಕ್ಯಾನ್ಸರ್‌ ಸಂಶೋಧನೆಗೆ ಸಂಬಂಧಿಸಿದಂತೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಶೋಬಿತ್ ರಂಗಪ್ಪ ಅವರು ಪ್ರಸ್ತುತ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಮೋಲೆಕ್ಯುಲರ್ ಮೆಡಿಸಿನ್ ಆಯೋಗದ ನಿರ್ದೇಶಕರಾಗಿದ್ದಾರೆ.

key words: Breast Cancer, Research @ Japan, Dr. Shobith,Adichunchanagiri University, who represented India.

SUMMARY:

Currently Dr shobith team of researchers conducting training programme at Hokkaido University, Japan.

In the upcoming years Dr shobith will be hosting the team of researchers from Hokkaido University, Japan & Addis Ababa University from Ethiopia at Adichunchangiri University. Dr shobith as a bridge between Japan and Indian actively from 2016.

Dr Shobith Rangappa currently heading Adichunchangiri institute for molecular medicine, Adichunchanagiri University as the Director is awarded with prestigious Japan Socciety for the Promotion of Science (JSPS) Core to core research program between India- Japan - Africa  where he serves as the principal Co-ordinator for Indian team.

The duration of the  project is for 3 years where each collaborative researchers from JSPS nominated laboratories trave

Tags :

.