HomeBreaking NewsLatest NewsPoliticsSportsCrimeCinema

50 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಎಫ್ ಡಿಎ.

11:55 AM Apr 04, 2024 IST | prashanth

ಮೈಸೂರು,ಏಪ್ರಿಲ್,4,2024 (www.justkannada.in): 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಪ್ರಥಮ ದರ್ಜೆ ಸಹಾಯಕ  ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಮೇಟಗಳ್ಳಿಯಲ್ಲಿರುವ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತರಬೇತಿ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಮಹೇಶ್ ಲೋಕಾಯುಕ್ತ ಬಲೆಗೆ ಬಿದ್ದ ಎಫ್‌ಡಿಎ. ಶಿಬಿರಾರ್ಥಿಗಳಿಗೆ ಊಟೋಪಚಾರದ ಬಿಲ್ ಪಾವತಿ ಸಂಬಂಧ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ಎಫ್ ಡಿಎ ಮಹೇಶ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ತರಬೇತಿ ಕೇಂದ್ರದ ಶಿಬಿರಾರ್ಥಿಗಳಿಗೆ ಊಟೋಪಚಾರ ನೀಡಿದ್ದಕ್ಕೆ ತರಬೇತಿ ಕೇಂದ್ರದಿಂದ 5.16 ಲಕ್ಷ ರೂಪಾಯಿ ಬಿಲ್ ಬಿಡುಗಡೆಯಾಗಿತ್ತು. ಈ ಬಿಲ್ ಪಾವತಿ ಮಾಡಲು ಕ್ಯಾಟರಿಂಗ್ ಮಾಲೀಕ ಶಿವನಾಗ ಎಂಬುವರ ಬಳಿ ಮಹೇಶ್80 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

ಈ ಬಗ್ಗೆ ಕ್ಯಾಟರಿಂಗ್ ಮಾಲೀಕ ಶಿವನಾಗ ಅವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು‌. ಶಿವನಾಗ ನೀಡಿದ ದೂರಿ‌ನ‌ ಮೇರೆಗೆ ಲೋಕಾಯುಕ್ತ ಎಸ್. ಪಿ ಸಜಿತ್, ಡಿ ವೈ ಎಸ್ ಪಿ ಕೃಷ್ಣಯ್ಯ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌ ಪೆಕ್ಟರ್ ಗಳಾದ ಜಯರತ್ನ, ಉಮೇಶ್ ಹಾಗೂ ಸಿಬ್ಬಂದಿಗಳಾದ ಲೋಕೇಶ್, ರಮೇಶ್, ಎಚ್ ಎನ್ ಗೋಪಿ, ಪ್ರಕಾಶ್, ಮೋಹನ್ ಗೌಡ, ವೀಣಾ, ಆಶಾ ಮೊದಲಾದವರು ಕಾರ್ಯಾಚರಣೆ ನಡೆಸಿ ಮಹೇಶ್ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಹಣದ ಸಮೇತ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Key words:  bribe,  FDA, Lokayukta, mysore

Tags :
50 thousand Rs- bribe- FDA – Lokayukta- mysore
Next Article