HomeBreaking NewsLatest NewsPoliticsSportsCrimeCinema

ಒಕ್ಕಲಿಗ ಸಿಎಂ ಕೆಳಗಿಳಿಸಿದ್ದು ಬಿಜೆಪಿ ಎಂಬ ಡಿಕೆಶಿ ಹೇಳಿಕೆಗೆ ಬಿಎಸ್ ವೈ ತಿರುಗೇಟು.

12:58 PM Apr 11, 2024 IST | prashanth

ಬೆಂಗಳೂರು,ಏಪ್ರಿಲ್ ,11,2024 (www.justkannada.in): ಆದಿಚುಂಚನಗಿರಿ ಮಠಕ್ಕೆ ಮೈತ್ರಿ ನಾಯಕರು ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ  ಒಕ್ಕಲಿಗ ಸಿಎಂ ಕೆಳಗಿಳಿಸಿದ್ದು ಬಿಜೆಪಿ. ಇದನ್ನ ಭೇಟಿ ವೇಳೆ ಸ್ವಾಮೀಜಿಗಳು ಕೇಳಬೇಕಿತ್ತು ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಬಿಎಸ್ ವೈ,  ಇಂತಹ ಹೇಳಿಕೆ ಕೊಡೋದ್ರಲ್ಲಿ ಡಿಕೆ ಶಿವಕುಮಾರ್ ಪ್ರವೀಣರು. ನಾವೆಲ್ಲರೂ ಒಕ್ಕಲಿಗರು ಸೇರಿ ಎಲ್ಲಾ ಸಮುದಾಯ ಒಗ್ಗಟ್ಟಿನಿಂದ ಇದ್ದೇವೆ.  ಎಲ್ಲದಕ್ಕೂ ಡಿಕೆ ಶಿವಕುಮಾರ್ ಅವರೇ ಉತ್ತರ ಕೊಡುತ್ತಿದ್ದಾರೆ.  ಈ ವಿಚಾರದಲ್ಲಿ ಸ್ವಾಮೀಜಿಗಳನ್ನ ಕೇಳೋದು ಏನಿದೆ ಎಂದು ಹೇಳಿದರು.

ಹೆಚ್ ಎಎಲ್ ಮುಚ್ಚುತ್ತಾರೆ ಎಂದು ರಾಹುಲ್ ಗಾಂಧಿ  ಅಪಪ್ರಚಾರ ಮಾಡಿದ್ರು. ಆದರೆ ಹೆಚ್ ಎಎಲ್ ಗೆ ಆದಾಯ ಬರುತ್ತಿದೆ. ಅಪಪ್ರಚಾರ ಮಾಡಿದ ರಾಹುಲ್ ಗಾಂಧಿ ಕ್ಷಮೆ ಕೇಳ್ತಾರಾ..? ಡಿಕೆ ಶಿವಕುಮಾರ್ ಕ್ಷಮೆ ಕೇಳಿಸ್ತಾರಾ ಎಂದು ಬಿಎಸ್ ವೈ ಕಿಡಿಕಾರಿದರು.

ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸಾರ್ಹ ಮತ್ತು ಸಮರ್ಥ ನಾಯಕತ್ವ ಕೊರತೆ ಇದೆ ಮತ್ತು ಹೇಳಿಕೊಳ್ಳಲು ಯೋಗ್ಯ ಸಾಧನೆಗಳಿಲ್ಲ. ಹಾಗಾಗಿ, ಕೇಂದ್ರದಿಂದ ಅನುದಾನ ಸಿಕ್ಕಿಲ್ಲ ಎನ್ನುತ್ತಾ ವಿವಾದ ಸೃಷ್ಟಿಸಿ ಜನರ ಬೆಂಬಲ ಗಿಟ್ಟಿಸುವ ವ್ಯರ್ಥ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

Key words: BS Yeddyurappa, DK shivakumar, Okkaliga CM

Tags :
BS Yeddyurappa-DCM- DK shivakumar-BJP -Okkaliga CM
Next Article