ಮೈಸೂರು ಮಹಾನಗರ ಪಾಲಿಕೆಯ ಬಜೆಟ್ ಮಂಡನೆ.
04:46 PM Feb 17, 2024 IST | prashanth
ಮೈಸೂರು,ಫೆಬ್ರವರಿ,17,2024(www.justkannada.in): 2024-25ನೇ ಸಾಲಿನ ಮೈಸೂರು ಮಹಾನಗರ ಪಾಲಿಕೆ ಬಜೆಟ್ ಅನ್ನು ಇಂದು ಆಡಳಿತಧಿಕಾರಿ ಡಾ. ಜಿ.ಸಿ ಪ್ರಕಾಶ್ ಮಂಡನೆ ಮಾಡಿದರು.
ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಆಡಳಿತಧಿಕಾರಿ ಡಾ. ಜಿ.ಸಿ ಪ್ರಕಾಶ್ ಅವರು 6.88 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ ಮಾಡಿದರು.
ಬಜೆಟ್ ಗಾತ್ರ 106696.64 ಆಗಿದ್ದು, ಪಾಲಿಕೆಯು 106062.50 ವೆಚ್ಚ ತೋರಿಸಿದೆ. ಈ ಬಾರಿಯ ಬಜೆಟ್ ನಲ್ಲಿ ಪುರಭವನ ಅಭಿವೃದ್ಧಿ, ವಲಯ ಕಚೇರಿ 9ರ ಕಟ್ಟಡ ನಿರ್ಮಾಣ, ಯುಜಿಡಿ ಅಭಿವೃದ್ಧಿ, ಕುಡಿಯುವ ನೀರು, ಪ್ರಮುಖ ವೃತ್ತಗಳ ಅಭಿವೃದ್ಧಿ, ವಿದ್ಯಾರಣ್ಯಪುರಂನ ತ್ಯಾಜ್ಯ ಸಂಸ್ಕರಣೆಗೆ ಆದ್ಯತೆ ನೀಡಲಾಗಿದೆ.
Key words: Budget- presentation -Mysore -Municipal Corporation.