ಫೆ.12ರಿಂದ ಬಜೆಟ್ ಅಧಿವೇಶನ: ಫೆ.16 ರಂದು ಆಯವ್ಯಯ ಮಂಡನೆ-ಸ್ಪೀಕರ್ ಯು.ಟಿ ಖಾದರ್.
01:10 PM Feb 05, 2024 IST
|
prashanth
ಮಂಗಳೂರು,ಫೆಬ್ರವರಿ,5,2024(www.justkannada.in): ಫೆಬ್ರವರಿ 12 ರಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 16 ರಂದು ಬಜೆಟ್ ಮಂಡನೆಯಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ತಿಳಿಸಿದರು.
ಇಂದು ಈ ಕುರಿತು ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ಫೆಬ್ರವರಿ 12 ರಂದು ಬಜೆಟ್ ಅಧಿವೇಶನವು ಪ್ರಾರಂಭವಾಗಲಿದ್ದು, ಉದ್ಘಾಟನಾ ದಿನ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಲಾಪಕ್ಕೆ ಶಾಸಕರು ಗೈರಾಗಬಾರದು. ದಿನಕ್ಕೊಂದು ಹೋಟೆಲ್ ನಿಂದ ಸವಿಯಾದ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಫೆಬ್ರವರಿ 16 ರಂದು ಬಜೆಟ್ ಮಂಡನೆಯೊಂದಿಗೆ ಫೆಬ್ರವರಿ 23 ರವರೆಗೆ ಅಧಿವೇಶನವನ್ನು ವಿಸ್ತರಿಸಲಾಗುವುದು. ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ನಿರ್ಣಯವು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗಳನ್ನು ಒಳಗೊಂಡಿರುತ್ತದೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದರು.
Key words: Budget session –from- Feb 12-Budget - Feb 16-Speaker -UT Khader.
Next Article