For the best experience, open
https://m.justkannada.in
on your mobile browser.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು..? ಮಾಹಿತಿ ನೀಡಿದ ಸಚಿವ ಹೆಚ್.ಕೆ.ಪಾಟೀಲ್‌

05:48 PM Jun 13, 2024 IST | prashanth
ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು    ಮಾಹಿತಿ ನೀಡಿದ ಸಚಿವ ಹೆಚ್ ಕೆ ಪಾಟೀಲ್‌

ಬೆಂಗಳೂರು,ಜೂನ್,13,2024 (www.justkannada.in): ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಟೆಂಡರ್ ಕರೆಯಲು‌ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹಾಗೆಯೇ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ  ಆಯೋಜನೆಗೆ ತೀರ್ಮಾನ ಮಾಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್‌ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್‌, ಸಭೆಯಲ್ಲಿ 11 ವಿಷಯಗಳ ಬಗ್ಗೆ ಇಂದು ಚರ್ಚೆಯಾಯಿತು. ಟೆಂಡರ್ ಕರೆಯಲು‌ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ೧147 ಟೆಂಡರ್ ಗೆ ಮಂಜೂರಾತಿ ನೀಡಿದ್ದೆವು. ಕೆಲಸ ಪ್ರಾರಂಭವಾಗಿರುವ ಪರಿಶೀಲನೆ ನಡೆಯಿತು. 94 ಯೋಜನೆಗಳಿಗೆ ಟೆಂಡರ್ ಕರೆಯಲಾಗಿತ್ತು.  19 ಟೆಂಡರ್ ಗಳು ಪರಿಶೀಲನೆಯಲ್ಲಿವೆ.18 ಟೆಂಡರ್ ಗೆ ವರ್ಕ್ ಆರ್ಡರ್ ನೀಡಲಾಗಿದೆ. 7 ಕಾಮಗಾರಿ ಪೂರ್ಣಗೊಂಡಿವೆ. 57 ಕಾಮಗಾರಿಗಳಿಗೆ ಟೆಂಡರ್ ಕರೆಯಬೇಕಿದೆ. ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆಯಲ್ಲಿ 19  ಟೆಂಡರ್ ನಗರಾಭಿವೃದ್ಧಿ ಇಲಾಖೆಯಲ್ಲಿ 14, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ 11 ಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಆಯೋಜನೆಗೆ ನಿರ್ಧರಿಸಲಾಗಿದೆ. 2025 ಫೆಬ್ರವರಿ 12  ರಿಂದ 14 ರವರೆಗೆ ನಡೆಸಲು ಸಮ್ಮತಿ ನೀಡಲಾಗಿದೆ. ಇದಕ್ಕೆ 75 ಕೋಟಿ  ರೂ. ಅನುದಾನ ಒದಗಿಸಲಾಗಿದೆ. ಹೆಚ್ಚುವರಿ 15 ಕೋಟಿ ರೂ.  ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಿವಿಲ್ ಸೇವಾ ನಿಯಮಗಳಿಗೆ ತಿದ್ದುಪಡಿ ಬಗ್ಗೆ ಚರ್ಚೆ ನಡೆಯಿತು. ಭಟ್ಕಳದಲ್ಲಿ 12 ಕೋಟಿ ವೆಚ್ಚದಲ್ಲಿ ನೂತನ ‌ನ್ಯಾಯಾಲಯ ಕಟ್ಟಡ ನಿರ್ಮಾಣ, 46.48 ಕೋಟಿ ರೂ  ವೆಚ್ಚದಲ್ಲಿ 112 ವೇಗದೂತ ಬಸ್ ಖರೀದಿಗೆ ಒಪ್ಪಿಗೆ, ಕೆಜಿಎಫ್ ಗಣಿಯ ಡಂಪಿಂಗ್ ಯಾರ್ಡ್ ಬಳಕೆ ‌ಬಗ್ಗೆ ಚರ್ಚೆ ನಡೆಸಲಾಯಿತು, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಆಕರ್ಷಣೆ, ವಾಣಿಜ್ಯ ಇಲಾಖೆ ಟೆಂಡರ್ ಕರೆದಿತ್ತು. ಬಾಸ್ಟನ್ ಕನ್ಸಲ್ಟಿಂಗ್ ಕಂಪನಿಗೆ ಟೆಂಡರ್ ನೀಡಲು ಅನುಮತಿ ನೀಡಲಾಗಿದೆ. 21 ಕೋಟಿ ರೂ. ವೆಚ್ಚದಲ್ಲಿ ನಾಲೆಡ್ಜ್ ಪಾರ್ಕ್ ನಿರ್ಮಾಣಕ್ಕೆ ತೀರ್ಮಾನಿಸಲಾಯಿತು ಎಂದು ತಿಳಿಸಿದರು.

Key words: cabinet, meeting, Minister , HK Patil

Tags :

.