HomeBreaking NewsLatest NewsPoliticsSportsCrimeCinema

ಎರಡು ಬಾರಿ ಪತ್ರ ಬರೆದ್ರೂ ಪ್ರಜ್ವಲ್ ಪಾಸ್ ಪೋರ್ಟ್ ರದ್ದು ಮಾಡದಿರುವುದು ತಪ್ಪು- ಎಸ್ ಆರ್ ಪಾಟೀಲ್.

11:44 AM May 24, 2024 IST | prashanth

ಬೆಂಗಳೂರು,ಮೇ,24,2024 (www.justkannada.in):  ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದರೂ ಪಾಸ್ ಪೋರ್ಟ್ ರದ್ದು ಮಾಡದಿರುವುದು ತಪ್ಪು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್ .ಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಎಸ್.ಆರ್ ಪಾಟೀಲ್, ಪೆನ್ ಡ್ರೈವ್ ಕೇಸ್  ನಲ್ಲಿ 2ಬಾರಿ ಪತ್ರ ಬರೆದರೂ ಪಾಸ್ ಪೋರ್ಟ್ ರದ್ದಾಗಿಲ್ಲ.  ಪಾಸ್ ಪೋರ್ಟ್ ರದ್ದು ಮಾಡದಿರುವುದು ಯಾರ ತಪ್ಪು..?  ಬಾಯಿಗೆ ಬಂದಂತೆ ಮಾತಾಡಿ ಗೂಬೆ ಕೂರಿಸುವುದು ಸರಿಯಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದರು.

ಪ್ರಜ್ವಲ್ ಗೆ ಪಾಸ್ ಪೋರ್ಟ್ ನೀಡಿದ್ಯಾರು.  ಪ್ರಜ್ವಲ್ ವಿದೇಶಕ್ಕೆ ಹೋಗಿದ್ದು ಎಫ್ ಐಆರ್ ಆದ ಮೇಲಲ್ಲ. ಎಫ್ ಐಆರ್ ಆಗುವ ಮೊದಲು ವಿದೇಶಕ್ಕೆ ಹೋಗಿದ್ದಾನೆ.  ದೇವೇಗೌಡರಿಗೆ ಕಳಂಕ ತರುವ ಕೆಲಸವನ್ನ ಕಾಂಗ್ರೆಸ್ ಪಕ್ಷ ಮಾಡಿಲ್ಲ ಎಂದು ಎಸ್ ಆರ್ ಪಾಟೀಲ್ ತಿಳಿಸಿದರು.

Key words: cancel, Prajwal, passport, SR Patil

Tags :
ancel-PrajwalPassportSR Patil
Next Article