HomeBreaking NewsLatest NewsPoliticsSportsCrimeCinema

ಪ್ರಜ್ವಲ್ ಪಾಸ್ ಪೋರ್ಟ್ ರದ್ದತಿಗೆ ಕರ್ನಾಟಕ ಮನವಿ ಸ್ವೀಕಾರ:  ಕಾನೂನು ಪ್ರಕ್ರಿಯೆ ಜಾರಿ- ವಿದೇಶಾಂಗ ಸಚಿವ ಜೈ ಶಂಕರ್.

06:32 PM May 24, 2024 IST | prashanth

ನವದೆಹಲಿ,ಮೇ,24,2024 (www.justkannada.in): ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಬರೆದಿದ್ದ ಪತ್ರದ ಬಗ್ಗೆ ವಿದೇಶಾಂಗ ಸಚಿವ ಜೈ ಶಂಕರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ವಿದೇಶಾಂತ ಸಚಿವ ಜೈಶಂಕರ್,  ಕರ್ನಾಟಕದ ಮನವಿ ಮೇ 21 ರಂದು ಅಧಿಕೃತವಾಗಿ ಬಂದಿದೆ.  ಪಾಸ್ ಪೋರ್ಟ್ ಕಾಯ್ದೆ ಅನ್ವಯವೇ ಪಾಸ್ ಪೋರ್ಟ್ ವಶಪಡಿಸಿಕೊಳ್ಳತ್ತೇವೆ . ಪಾಸ್ ಪೋರ್ಟ್ ವಶಪಡಿಸಿಕೊಳ್ಳಲು ನ್ಯಾಯಾಲಯ ಅಥವಾ ಪೊಲೀಸರಿಗೆ ಮನವಿ ಮಾಡುವ ಅಗತ್ಯವಿದೆ ಎಂದರು.

ಕರ್ನಾಟಕದ ಮನವಿಯನ್ನ ವಿದೇಶಾಂಗ ಸಚಿವಾಲಯ ಸ್ವೀಕರಿಸಿದೆ. ಪಾಸ್ ಪೋರ್ಟ್ ವಶಪಡಿಸಿಕೊಳ್ಳಲು ಮೇ 23 ರಿಂದಲೇ ಕ್ರಮ ಕೈಗೊಳ್ಳಲಾಗುತ್ತಿದೆ. ನಾವು ತುರ್ತಾಗಿ ಕ್ರಮ ಜರುಗಿಸಿದ್ದೇವೆ ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಜೈಶಂಕರ್ ತಿಳಿಸಿದರು.

Key words: cancellation, Prajwal, passport, Jai Shankar

Tags :
Karnataka -plea - cancellation -Prajwal –passport-Minister -Jai Shankar.
Next Article