ಅನಂತ ಕುಮಾರ್ ಹೆಗಡೆ ವಿರುದ್ದ ಪ್ರಕರಣ ದಾಖಲು: ಬಂಧಿಸುವ ಕುರಿತು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ಏನು..?
01:50 PM Jan 16, 2024 IST
|
prashanth
ಬೆಂಗಳೂರು,ಜನವರಿ,16,2024(www.justkannada.in): ದ್ವೇಷ ಭಾಷಣ ಆರೋಪದ ಮೇಲೆ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಅವರನ್ನ ಬಂಧಿಸುವುದು ಸ್ಥಳೀಯ ಪೊಲೀಸರ ವಿವೇಚನೆಗೆ ಬಿಟ್ಟಿದ್ದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಕುಮಟಾ ಪೊಲೀಸ್ ಠಾಣೆಯಲ್ಲಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬಂಧಿಸೋದು ಬಿಡೋದು ಸ್ಥಳೀಯ ಪೊಲೀಸರ ವಿವೇಚನೆಗೆ ಬಿಟ್ಟಿದ್ದು. ಸ್ಥಳೀಯ ಪೊಲೀಸರು ಸಾಕ್ಷ್ಯಗಳನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಾರೆ ಎಂದರು.
ಯಾರನ್ನಾದರೂ ಬಂಧಿಸಿ ಅಥವಾ ಬಂಧಿಸಿದವರನ್ನು ಬಿಟ್ಟುಬಿಡಿ ಎಂದು ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸ್ಥಳೀಯ ಪೊಲೀಸರು ಕೇಸ್ ದಾಖಲಿಸಿರುವ ಸೆಕ್ಷನ್ ಅಡಿಯಲ್ಲಿ ಬಂಧನಕ್ಕೆ ಅವಕಾಶವಿದ್ದರೆ ಬಂಧಿಸುತ್ತಾರೆ. ಅದು ಅವರ ನಿರ್ಧಾರ ಎಂದು ಪರಮೇಶ್ವರ್ ತಿಳಿಸಿದರು.
Key words: Case- filed- against -Ananth Kumar Hegde-Home Minister- Parameshwar
Next Article