ದತ್ತಪೀಠ ಹೋರಾಟಗಾರ ಮೇಲಿನ ಕೇಸ್ ರೀ ಓಪನ್ : ಸರ್ಕಾರದ ವಿರುದ್ದ ಸಿ.ಟಿ. ರವಿ ಆಕ್ರೋಶ.
04:16 PM Jan 04, 2024 IST
|
prashanth
ಚಿಕ್ಕಮಗಳೂರು,ಜನವರಿ,4,2024(www.justkannada.in): 7 ವರ್ಷದ ಹಳೆಯದಾದ ದತ್ತಪೀಠ ಹೋರಾಟಗಾರ ಮೇಲಿನ ಪ್ರಕರಣವನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ರೀ ಓಪನ್ ಮಾಡಿದ್ದು ಇದೀಗ ಸರ್ಕಾರದ ವಿರುದ್ದ ಮಾಜಿ ಸಚಿವ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸಿ.ಟಿ ರವಿ, ದುರುದ್ದೇಶದಿಂದಲೇ ಕೇಸ್ ರೀ ಓಪನ್ ಮಾಡಿದ್ದಾರೆ. ಈ ಮೂಲಕ ಸರಕಾರ ಜನರನ್ನ ಪ್ರಚೋದಿಸುತ್ತಿದೆ. ಜನ ಶಾಂತಿಯಿಂದ ಇರುವುದು ಸರ್ಕಾರಕ್ಕೆ ಬೇಕಾಗಿಲ್ಲ. ನಾವು ಎಂದಿಗೂ ಎದೆಗುಂದುವುದಿಲ್ಲ ಹೋರಾಟ ಮಾಡುತ್ತೇವೆ. ನಾವು ಹೋರಾಟ ಮಾಡುತ್ತೇವೆ. ಸುಮ್ಮನೆ ಕೂರಲ್ಲ ಎಂದರು.
ನಮ್ಮ ಸಂಘಟನೆ ತುಳಿಯುವ ಉದ್ದೇಶದಿಂದ ಕೇಸ್ ರೀ ಓಪನ್ ಮಾಡಿದ್ದಾರೆ. ಯೋಜನಾ ಬದ್ದವಾಗಿಯೇ ಸಂಘಟನೆಗಳನ್ನ ಮಣಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಿ.ಟಿ ರವಿ ಕಿಡಿಕಾರಿದರು.
Key words: Case -reopened - Dattapeeth fighter- CT Ravi –outraged- against - government.
Next Article