HomeBreaking NewsLatest NewsPoliticsSportsCrimeCinema

ಸುಪ್ರೀಂಕೋರ್ಟ್ ಮಾನದಂಡಗಳಂತೆ ಸಮೀಕ್ಷೆ ನಡೆಸಿ ಜಾತಿ ಜನಗಣತಿ ವರದಿ ಸಲ್ಲಿಸಲಾಗಿದೆ-ಕೆ.ಎನ್.ಲಿಂಗಪ್ಪ

03:54 PM Nov 29, 2023 IST | prashanth

ಮೈಸೂರು,ನವೆಂಬರ್,29,2023(www.justkannada.in): ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯನ್ನು ಸರ್ವೋಚ್ಚ ನ್ಯಾಯಾಲಯದ ಮಾನದಂಡಗಳಂತೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ ಎಂದು ಕಾಂತರಾಜು ಆಯೋಗದಲ್ಲಿ ಸದಸ್ಯರಾಗಿದ್ದ ಕೆ.ಎನ್.ಲಿಂಗಪ್ಪ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿಂದು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಡೆದ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಕೆ.ಎನ್.ಲಿಂಗಪ್ಪ, 1892 ರಂದು ಬ್ರಿಟೀಷ್ ಆಡಳಿತದಲ್ಲಿ ಜಾರಿಗೆ ಬಂದ ಜನಗಣತಿಯಲ್ಲಿ ಜಾತಿಯು ಪ್ರಮುಖ ಮಾನದಂಡವಾಯಿತು. 1958 ರಲ್ಲಿ ಭಾರತ ಸರ್ಕಾರದ ಜನಗಣತಿ ಕಾಯ್ದೆ ಜಾತಿಯನ್ನು ಕಡೆಗಣಿಸಿದ್ದಕ್ಕೆ ಕಾರಣ ತಿಳಿದಿಲ್ಲ. ಆದರೆ, ರಾಜ್ಯದಲ್ಲಿ ಜಾರಿಗೆ ಬಂದ ಮಿಲ್ಲರ್ ಸಮಿತಿ ವರದಿ, ಕೇಂದ್ರದ ಮಂಡಳದ ವರದಿಗಳು ಜಾತಿಯನ್ನು ಪರಿಗಣಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯನ್ವಯ ಪ್ರತಿಪಾದಿಸುವುದು. ಇಂದಿರಾ ಸಹನಿ ವರ್ಸ್ಸ್ ಭಾರತ ಸರ್ಕಾರದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಕೂಡ ಬಹುಮತದೊಂದಿಗೆ ಇಂತಹ ವರದಿಗಳ ಸಿಂಧುತ್ವವನ್ನು ಎತ್ತಿ ಹಿಡಿದಿದೆ. ಈ ಎಲ್ಲ ಆಧಾರದಲ್ಲಿ ರಾಜ್ಯದಲ್ಲಿ ನಡೆದ ಸಮೀಕ್ಷೆಯು ನ್ಯಾಯಸಮ್ಮತವಾಗಿದೆ ಎಂದು ತಿಳಿಸಿದರು.

ಕಾಂತರಾಜ ಆಯೋಗದ ವರದಿಯಲ್ಲಿದ್ದ ಐವರೂ ಸದಸ್ಯರು ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದಾರೆ ಮತ್ತು ತಜ್ಞರು ಹಿಂದಿನ ಆಯೋಗಗಳ ಅಧ್ಯಕ್ಷರನ್ನು ಸಂಪರ್ಕಿಸಿ ವಿವಿಧ ಮಾನದಂಡಗಳ ಮೂಲಕ 2,500 ಮುಖ್ಯ ತರಬೇತಿದಾರರು 22,186 ಮೇಲ್ವಿಚಾರಕರು ಹಾಗೂ 1,36,416 ಸಿಬ್ಬಂದಿಗಳ ಮೂಲಕ ಸಮೀಕ್ಷೆ ನಡೆಸಲಾಗಿದೆ. 1361 ಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಸಮೀಕ್ಷೆಯಲ್ಲಿ ಬಗೆಯ ಅಂಶಗಳ ಮಾಹಿತಿಗಳನ್ನು ಜನರಿಂದ ಕಲೆ ಹಾಕಲಾಗಿದೆ.  ಬೆಂಗಳೂರಿನಂತಹ ನಗರದಲ್ಲಿ ಸಮೀಕ್ಷೆಗೆ ಸ್ವಲ್ಪ ಹಿನ್ನೆಡೆಯಾಗಿರಬಹುದು. ಆದರೆ, ರಾಜ್ಯಾದಾದ್ಯಂತ ಶೇ.99ರಷ್ಟು ಪ್ರಗತಿಯೊಂದಿಗೆ ಸಮೀಕ್ಷೆಯಾಗಿದೆ ಎಂದು ತಿಳಿಸಿದರು.

ನಾವು ಸಮೀಕ್ಷೆಯ ಪ್ರಗತಿ ಮತ್ತು ಸರಿಯಾದ ಗತಿಯಲ್ಲಿ ನಡೆಯುತ್ತಿದೆ ಆಯೋಗದ ಸದಸ್ಯರು ಪರಿಶೀಲಿಸಿದ್ದೇವೆ ಹೊರತು ಮೊದಲು ನೀಡಿದ ಮಾನದಂಡಗಳಂತೆ ಜಿಲ್ಲಾಧಿಕಾರಿ, ವಿಭಾಗಾಧಿಕಾರಿ, ತಹಶೀಲ್ದಾರರ ಮೂಲಕ ಸಮೀಕ್ಷೆ ನಡೆದಿದೆ. ಹೀಗಾಗಿ ಆಯೋಗದ ಸದಸ್ಯರು ಕಚೇರಿಯಲ್ಲಿ ಕುಳಿತು ವರದಿ ಮಾಡಿದ್ದರು, ಜಾತಿ ತಾರಾತಮ್ಯದಲ್ಲಿ ಮಾಡಿದ್ದಾರೆ ಎಂಬ ಆರೋಪವು ಸತ್ಯಕ್ಕೆ ದೂರವಾದದ್ದು. ಇದೊಂದು ಕಪೋಲ ಕಲ್ಪಿತ ಆರೋಪ.  ಸಮೀಕ್ಷೆಗೆ ತೆರಳಿದಾಗ ಜನರು ಹೇಳಿದ ಅಂಕಿ-ಅಂಶಗಳನ್ನು ದಾಖಲಿಸಿದ್ದೇವೆ ಹೊರತು ನಾವು ಯಾವುದನ್ನು ಸೇರಿಸಿಲ್ಲ ಎಂದು ಸ್ಪಷ್ಟಪಡಿಸಿದರು.

1500 ಪುಟಗಳ ಮುದ್ರಿತ ಪ್ರತಿ ಸಿದ್ದವಾಗಿತ್ತು. ಸರ್ಕಾರದ ಅವಧಿ ಮುಗಿದಿದ್ದರಿಂದ ಆ ಸಂದರ್ಭದಲ್ಲಿ ಮುದ್ರಿತ ಪ್ರತಿ ಎಲ್ಲ ದಾಖಲೆಗಳನ್ನು ಸರ್ಕಾರದ ಕೊಠಡಿಯಲ್ಲಿ ಇಟ್ಟು ಮುದ್ರೆ ಹಾಕಿ ಸರ್ಕಾರಕ್ಕೆ ನೀಡಲಾಗಿತ್ತು. ಮುಖ್ಯ ಕಾರ್ಯದರ್ಶಿಗಳಿಗೆ ಕೊಠಡಿಯ ಬೀಗದ ಕೈಯನ್ನು ನೀಡಲಾಗಿತ್ತು. ಬಳಿಕ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ವರದಿಯ ಅನುಷ್ಠಾನ ಕಾಳಜಿ ತೋರದ ಕಾರಣ ಅದು ನೆನೆಗುದಿಗೆ ಬಿತ್ತು. ವರದಿಯಲ್ಲಿ ಎರಡು ಭಾಗವಿದೆ. ದತ್ತಾಂಶಗಳ ಭಾಗಕ್ಕೆ ಅಧ್ಯಕ್ಷರು, ಸದಸ್ಯರು, ಸದಸ್ಯ ಕಾರ್ಯದರ್ಶಿಗಳ ಸಹಿ ಹಾಕಲಾಗಿದೆ.  ವರದಿಯ ಭಾಗಕ್ಕೆ ಅಧ್ಯಕ್ಷರ, ಸದಸ್ಯರು ಸಹಿ ಹಾಕಲಾಗಿದ್ದು, ಸದಸ್ಯ ಕಾರ್ಯದರ್ಶಿಯ ಸಹಿ ಹಾಕಿರುವುದಿಲ್ಲ. ಆದರೆ, ವರದಿಯ ಸಭೆಗಳ‌ ನಡವಳಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಲಾಗಿದೆ. ವರದಿ ಸ್ಬೀಕಾರಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೂ ಏಕೇ ವಿಳಂಬವಾಯಿತು ಎಂಬುದು ನಿಗೂಢವಾಗಿದೆ ಎಂದು ಕೆ.ಎನ್.ಲಿಂಗಪ್ಪ ಹೇಳಿದರು.

ಬಳಿಕ ಬಂದ ಆಯೋಗ ವರದಿಯಲ್ಲಿ ಮುದ್ರಿತ ಪ್ರತಿಯಿದೆ. ಅಸ್ತಪ್ರತಿ ಕಾಣೆಯಾಗಿದೆ ಎಂದಿರುವುದು ಗೊಂದಲಕಾರಿಯಾಗಿದೆ. ಹೊಸ ಆಯೋಗ ಯಾರ ಅನುಮತಿ ಪಡೆದು ವರದಿ ಪರಿಶೀಲನೆಗೆ ತೆರಳಿತು ಎಂಬ ಮಾಹಿತಿ ಇಲ್ಲ ಇದನ್ನು ಸರ್ಕಾರ ತನಿಖೆಗೆ ಒಳಪಡಿಸಬೇಕು. ವರದಿ ದತ್ತಾಂಶ ಹಾಗೂ ಮಾಹಿತಿಗಳು ಸರ್ಕಾರದಲ್ಲಿ ಸುರಕ್ಷಿತವಾಗಿರುತ್ತವೆ. ಅದನ್ನು ಯಾರು ನಾಶ ಮಾಡಲು ಸಾಧ್ಯವಿಲ್ಲ, ತಿರುಚಲು ಸಾಧ್ಯವಿಲ್ಲ. ಸಂಪೂರ್ಣ ಮಾಹಿತಿಯೊಂದಿಗೆ ವರದಿ‌ ನೀಡಲು ಸಾಧ್ಯವಿದೆ.  ವರದಿ ಅನುಷ್ಠಾನಕ್ಕೆ ವಿಳಂಬವಾದರೂ ವರದಿ ಅನುಷ್ಠಾನ ಔಚಿತ ಪೂರ್ಷವಾಗಿ ಇರಲಿದೆ ಎಂದು ಕೆ.ಎನ್‌ ಲಿಂಗಪ್ಪ ಹೇಳಿದರು.

Key words: Caste census -report - submitted - Supreme Court - K.N. Lingappa

Tags :
caste censusK.N. LingappaReportsubmittedSupreme Court
Next Article