For the best experience, open
https://m.justkannada.in
on your mobile browser.

ಕೇಂದ್ರದ ಬಜೆಟ್ ನಿರಾಶದಾಯಕ, ಎಲೆಕ್ಷನ್ ಬಜೆಟ್- ಸಿಎಂ ಸಿದ್ದರಾಮಯ್ಯ ಟೀಕೆ.

05:32 PM Feb 01, 2024 IST | prashanth
ಕೇಂದ್ರದ ಬಜೆಟ್ ನಿರಾಶದಾಯಕ  ಎಲೆಕ್ಷನ್ ಬಜೆಟ್  ಸಿಎಂ ಸಿದ್ದರಾಮಯ್ಯ ಟೀಕೆ

ಬೆಂಗಳೂರು,ಫೆಬ್ರವರಿ,1,2024(www.justkannada.in):  ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಮಧ್ಯಂತರ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬಜೆಟ್ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಇದೊಂದು ನಿರಾಶಾದಾಯಕ, ಎಲೆಕ್ಷನ್ ಬಜೆಟ್ ಆಗಿದೆ. ಬಜೆಟ್ ಬಗ್ಗೆ ಮಾತನಾಡುವಂತಹದ್ದು ಏನೂ ಇಲ್ಲ.ಇದೊಂದು ಬಹಳ ಚರ್ಚೆ ಮಾಡುವ ಬಜೆಟ್ ಅಲ್ಲ ಎಂದು ಹೇಳಿದರು.

2024-25ನೇ ವರ್ಷದ ಮಧ್ಯಂತರ ಬಜೆಟ್ ಮುಗಿಸಿದ್ದಾರೆ. ಚುನಾವಣೆ ಇರೋದರಿಂದ ಪೂರ್ಣ ಬಜೆಟ್ ಘೋಷಣೆ ಆಗದಿರಬಹುದು. ಇಂದು 47,65,768 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Center-budget – disappointing- election -budget- CM -Siddaramaiah

Tags :

.