ರಾಜ್ಯದ ಬಗ್ಗೆ ಕೇಂದ್ರದಿಂದ ಮಲತಾಯಿ ಧೋರಣೆ- ಸಚಿವ ಕೆ.ಎನ್ ರಾಜಣ್ಣ ವಾಗ್ದಾಳಿ.
12:10 PM May 01, 2024 IST
|
prashanth
ಬಾಗಲಕೋಟೆ,ಮೇ,1,2024 (www.justkannada.in): ಬರಪರಿಹಾರ, ಅನುದಾನದ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ರಾಜ್ಯಸರ್ಕಾರ ಬರ ಪರಿಹಾರಕ್ಕೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದೆವು. ಸುಪ್ರೀಂಕೋರ್ಟ್ ಮೊರೆ ಹೋಗಿದ್ದಕ್ಕೆ ನಮಗೆ ಪರಿಹಾರ ಸಿಕ್ಕಿತು ಎಂದರು.
ಕರ್ನಾಟಕದಿಂದ ವರ್ಷಕ್ಕೆ 4 ಲಕ್ಷ ಕೋಟಿ ರೂ. ಗೂ ಹೆಚ್ಚು ತೆರಿಗೆ ಪಾವತಿಸುತ್ತಿದ್ದೇವೆ. ಆದರೆ ನಮಗೆ ಕೇವಲ 55 ಸಾವಿರ ಕೋಟಿ ರೂ. ಮಾತ್ರ ಸಿಗುತ್ತೆ. ಇಷ್ಟೆಲ್ಲಾ ಆದರೂ ರಾಜ್ಯದ ಸಂಸದರು ಮಾತನಾಡುತ್ತಿಲ್ಲ. ಇದು ದುರಾದೃಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Key words: Center, Minister, KN Rajanna
Next Article